ಹಾರುವ ಕಾರುಗಳ ನಿಲ್ದಾಣ ಹೇಗಿದೆ ನೋಡಿ…!

ಈ ಸುದ್ದಿಯನ್ನು ಶೇರ್ ಮಾಡಿ

ds

ಇದು ಜೆಟ್ ಯುಗ. ಎಲ್ಲವೂ ಅತ್ಯಂತ ತ್ವರಿತವಾಗಿ ನಡೆಯುತ್ತದೆ. ಅಮೆರಿಕದಲ್ಲಿ ಹಾರುವ ಕಾರುಗಳಲ್ಲಿ ಮಂದಿ ಕೆಲಸಕ್ಕೆ ಹೋಗಿ ಬರುವ ಕಾಲ ದೂರವಿಲ್ಲ. ಇದೇ ಪರಿಕಲ್ಪನೆ ಆಧಾರದ ಮೇಲೆ ಮಿಯಾಮಿಯ ಬಿಲ್ಡರ್ ಒಬ್ಬರು ಗಗನಚುಂಬಿ ಕಟ್ಟಡವೊಂದರ ಮೇಲೆ ಹಾರುವ ಕಾರು ನಿಲ್ದಾಣ ನಿರ್ಮಿಸುವ ಯೋಜನೆ ರೂಪಿಸಿದ್ದಾರೆ. ಮಿಯಾಮಿ-ಅಮೆರಿಕದ ಮುಂಚೂಣಿ ನಗರಗಳಲ್ಲಿ ಒಂದು. ಇಲ್ಲಿ ಮುಗಿಲಚುಂಬಿ ಕಟ್ಡಡಗಳಿಗೆ ಕೊರತೆ ಇಲ್ಲ. ಮಿಯಾಮಿಯ ಆಗಸ ಭವಿಷ್ಯದಲ್ಲಿ ಹಾರುವ ಕಾರುಗಳು ಮತ್ತು ಪ್ರಯಾಣಿಕರ ಡ್ರೋಣ್‍ಗಳಿಂದ ತುಂಬಿ ಹೋಗುವ ಕಾಲ ದೂರವಿಲ್ಲ. ಗಗನ ಮಾರ್ಗದಲ್ಲೇ ಜನರು ಉದ್ಯೋಗಕ್ಕೆ ಹೋಗಿ ಬರುತ್ತಾರೆ.

ಭವಿಷ್ಯದ ಈ ಪರಿಕಲ್ಪನೆಗೆ ಈಗಿನಿಂದಲೂ ಸಿದ್ದವಾಗಿರುವ ಮಿಯಾಮಿಯ ಕಟ್ಟಡ ನಿರ್ಮಾತೃ ಒಬ್ಬರು ಸ್ಕೈ ರ್ಪೋರ್ಟ್ ಅಥವಾ ಕಾರ್ ರ್ಪೋರ್ಟ್ ಯೋಜನೆಗೆ ರೂಪು ನೀಡಿದ್ದಾರೆ. ಮಿಯಾಮಿಯ ಎತ್ತರದ ಕಟ್ಟಡಗಳ ಸಾಲಿಗೆ ಸೇರ್ಪಡೆಯಾಗಿರುವ ಪ್ಯಾರಾಮೌ0ಟ್ ಮಿಯಾಮಿ ವಲ್ರ್ಡ್ ಸೆಂಟರ್ 700 ಅಡಿಗಳಷ್ಟು ಎತ್ತರವಿದೆ. ಇದರ ಮೇಲೆ ಹಾರುವ ಕಾರುಗಳು ಮತ್ತು ಪ್ರಯಾಣಿಕರ ಡ್ರೋಣ್‍ಗಳ ನಿಲುಗಡೆಗೆ ನಿಲ್ದಾಣ ನಿರ್ಮಿಸಿದ್ದಾರೆ.

ಈ ರೀತಿಯ ತಂತ್ರಜ್ಞಾನಕ್ಕೆ ನಾವು ಎಷ್ಟು ಹತ್ತಿರದಲ್ಲಿದ್ದೇವೆ ಎಂಬುದು ಜನರಿಗೆ ಮನವರಿಕೆಯಾಗಿಲ್ಲ. ನಾವು ಹಾರುವ ಕಾರು ಅಥವಾ ಪ್ರಯಾಣಿಕರ ಡ್ರೋಣ್‍ನಲ್ಲಿ ಹಾರಬಹುದು. ಇದೇ ಪರಿಕಲ್ಪನೆಯಲ್ಲಿ ಸ್ಕೈ ರ್ಪೋರ್ಟ್ ಅಥವಾ ಕಾರ್ ರ್ಪೋರ್ಟ್‍ನನ್ನು ಕಟ್ಟಡ ಮೇಲೆ ನಾವು ನಿರ್ಮಿಸಿದ್ದೇವೆ. ಇದು ಹೆಲಿಪ್ಯಾಡ್‍ಗಳಿಗಿಂತ ತುಂಬಾ ಭಿನ್ನ ಎನ್ನುತ್ತಾರೆ ಡೆವೆಲಪರ್ ಡೇನಿಯಲ್ ಕೊಡ್ಸೆ.  ಈ ಗಗನಚುಂಬಿ ಕಟ್ಟಡ ಈಗ ಮಿಯಾಮಿಯ ಪ್ರಮುಖ ಆಕರ್ಷಣೆ. ಇಲ್ಲಿ ಕಚೇರಿ ಅಥವಾ ವಾಣಿಜ್ಯ ಕೇಂದ್ರ ಹೊಂದಲು ಅಮೆರಿಕ ಮತ್ತು ವಿದೇಶಗಳ ಉದ್ಯಮಿಗಳು ಮುಂದಾಗಿದ್ದಾರೆ. ಆಕರ್ಷಕ ವಿನ್ಯಾಸದ ಈ ಸುಸಜ್ಜಿತ ಟವರ್‍ನಲ್ಲಿ ಸಕಲ ಸೌಲಭ್ಯಗಳ ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು, ಹೈ-ಟೆಕ್ ಕಚೇರಿಗಳು, ಸೂಪರ್ ಫ್ಲಾಟ್‍ಗಳಿವೆ.

Facebook Comments

Sri Raghav

Admin