ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ದೋಣಿ ಮುಳುಗಡೆ, 13 ಬೆಸ್ತರ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Fishermen
ಪಲ್ಘರ್, ಮೇ 9-ಮಹರಾಷ್ಟ್ರದ ಪಲ್ಘರ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಇಂದು ಮುಂಜಾನೆ ಮೀನುಗಾರಿಕೆ ದೋಣಿ ಮುಳುಗಡೆಯಾಗಿದ್ದು, ಅದರಲ್ಲಿದ್ದ 13 ಬೆಸ್ತರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸತ್ಪತಿ ಪಟ್ಟಣದಿಂದ 34 ನಾಟಿಕಲ್ ಮೈಲಿಗಳ ದೂರದ ಸಮುದ್ರದಲ್ಲಿ 2 ಗಂಟೆ ನಸುಕಿನಲ್ಲಿ ದೋಣಿ ಮುಳುಗಿತು. ಅಪಾಯದ ಸಂದೇಶ ರವಾನೆಯಾದ ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕರಾವಳಿ ರಕ್ಷಣಾ ಪಡೆ ಮತ್ತು ಸ್ಥಳೀಯ ಬೆಸ್ತರು 13 ಮಂದಿಯನ್ನು ರಕ್ಷಿಸಿದರು. ಇವರೆಲ್ಲರನ್ನೂ ಸುರಕ್ಷಿತವಾಗಿ ಸಮುದ್ರ ದಂಡೆಗೆ ಕರೆತರಲಾಗಿದೆ ಎಂದು ಪಲ್ಘರ್ ಗ್ರಾಮಾಂತರ ಜಿಲ್ಲೆ ಪೊಲೀಸ್ ವಕ್ತಾರ ಹೇಮಂತ್ ಕುಮಾರ್ ತಿಳಿಸಿದ್ದಾರೆ.

Facebook Comments

Sri Raghav

Admin