ಉಪಚುನಾವಣೆಯಲ್ಲಿ ಸೋತರೂ ಶ್ರೀನಿವಾಸ್ ಪ್ರಸಾದ್ ಒಣ ಜಂಭ ಬಿಟ್ಟಿಲ್ಲ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Srinivas-Prasad-and-Siddara
ನಂಜನಗೂಡು, ಮೇ 9-ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೀನಾಯ ಸೋಲು ಕಂಡ ಮೇಲೂ ಒಣ ಜಂಭ ಬಿಟ್ಟಿಲ್ಲ, ಬಿಜೆಪಿ ಪಕ್ಷಕ್ಕೆ ಹೋದ ಮೇಲೆ ಅದಾವ ಸೀಮೆ ಸ್ವಾಭಿಮಾನಿ ಎಲ್ಲವೂ ಬೂಟಾಟಿಕೆ ಎಂದು ಪರೋಕ್ಷವಾಗಿ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.  ನಗರದಲ್ಲಿ ಅಭ್ಯರ್ಥಿ ಕಳಲೆ ಎನ್.ಕೇಶವಮೂರ್ತಿ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ನನ್ನ ಹಾಗೂ ಸಿದ್ದರಾಮಯ್ಯ ನಡುವಿನ ನೇರ ಸ್ಫರ್ಧೆ ಎಂದು ಸವಾಲು ಹಾಕಿದ್ದ ಅವರು ಮೀಸಲು ಕ್ಷೇತ್ರದಲ್ಲಿ ನಾನು ಹೇಗೆ ಅವರಿಗೆ ಸ್ಪರ್ಧಿಯಾಗಲೀ ಎಂದು ಹೇಳಿದ್ದೇ, ಉಪ ಚುನಾವಣೆಯಲ್ಲಿ ಮತದಾರರು ಕೇಶವಮೂರ್ತಿರವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿದರು. ಆದರೂ ನನ್ನ ವಿರುದ್ದ ಮಾತನಾಡುವ ಚಾಳಿ ಬಿಟ್ಟಿಲ್ಲ ಎಂದು ಪ್ರಸಾದ್ ವಿರುದ್ದ ಹರಿ ಹಾಯ್ದರು.

ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇಶವಮೂರ್ತಿ ಪರವಾಗಿ ಜೆಡಿಎಸ್ ಬೆಂಬಲಿಸಿದ್ದು ನಿಜ, ಅದಕ್ಕಾಗಿ ಧನ್ಯವಾದ ಅರ್ಪಿಸಿದ್ದೇವೆ. ಆದರೆ ಹೆಚ್.ಡಿ, ಕುಮಾರಸ್ವಾಮಿ ನಮ್ಮ ಸಹಕಾರದಿಂದ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿತ್ತು ಎಂದು ಹೇಳುವುದು ಸುಳ್ಳು ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ಆಲಿ ಬಾಬಾ ಮತ್ತು 40 ಮಂದಿ ಕಳ್ಳರ ತಂಡಕ್ಕೆ ಅಧಿಕಾರ ಕೊಡಬೇಕಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಹಿಗಾಗಿಯೇ ಜನರು ಯಡಿಯೂರಪ್ಪ ಬದಲಾಗಿ ಜೈಲೂರಪ್ಪ ಎನ್ನುವಂತೆ ಸಲಹೆ ನೀಡುತ್ತಿದ್ದಾರೆ. ಎಂದು ಸಿದ್ದರಾಮಯ್ಯ ಹೇಳಿದರು.

ಅಭ್ಯರ್ಥಿ ಕೇಶವಮೂರ್ತಿ ಮಾತನಾಡಿ, ಉಪ ಚುನಾವಣೆಯಲ್ಲಿ ನನ್ನ ಗೆಲುವಿಗೆ ಎಲ್ಲರೂ ಸಹಕರಿಸಿ, 11 ತಿಂಗಳ ಕಾಲ ಈ ಕ್ಷೇತ್ರದಲ್ಲಿ ಶಾಸಕರಾಗಲು ಸಹಕರಿಸಿದ್ದೀರಿ, ಮತ್ತೊಂದು ಪೂರ್ಣಾವಧಿಗೆ ಅವಕಾಶ ಕಲ್ಪಿಸಿ, ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡೋಣ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಿಡಿ, ನಮ್ಮ ಗುರಿ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವುದೇ ಆಗಿದೆ.

ಸಚಿವ ಹೆಚ್.ಸಿ, ಮಹದೇವಪ್ಪ, ಸಂಸದ ಆರ್.ಧ್ರುವನಾರಯಣ್, ಮುಖಂಡರಾದ ಸುನೀಲ್ ಬೋಸ್, ನಗರಸಭಾ ಉಪಾಧ್ಯಕ್ಷ ಪ್ರದೀಪ್, ಕುರಹಟ್ಟಿ ಮಹೇಶ್, ನಂದಕುಮಾರ್, ಎಲ್.ಮಾದಪ್ಪ, ಎನ್.ಎಂ,ಮಂಜುನಾಥ್, ಕೆ.ಮಾರುತಿ, ಅಕ್ಬರ್ ಅಲೀ, ಬಿ.ಎಂ,ನಾಗೇಶ್‍ರಾಜ್, ತಮ್ಮಣ್ಣೇಗೌಡ ನಗರಸಭಾ ಸದಸ್ಯರುಗಳಾದ ಹುಂಡಿ ನಿಂಗಪ್ಪ, ಸಿ.ಎಂ.ಶಂಕರ್, ರತ್ನಮ್ಮ ದೇವರಾಜು, ಹುಂಡಿನಾಗಾರಾಜು, ಮಾದೇಶ, ನಟೇಶ್, ಎಸ್.ಜಗದೀಶ್, ತಾ|| ಉಪ್ಪಾರ ಸಂಘದ ಅಧ್ಯಕ್ಷ ಮೂಗಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin