ನನಗೂ ಒಂದು ಬಾರಿ ಸಿಎಂ ಆಗೋ ಛಾನ್ಸ್ ಕೊಡಿ ಎಂದು ಮತಯಾಚಿಸಿದ ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ತುರುವೇಕೆರೆ,ಮೇ9- ಹೆಚ್.ಡಿ.ದೇವೆಗೌಡರನ್ನು ಪ್ರಧಾನಮಂತ್ರಿಯಾಗಿ ಹಾಗೂ ಹೆಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದೀರಾ. ಹಾಗೆಯೇ ನನಗೂ ಒಂದು ಬಾರಿ ಸಿಎಂ ಛಾನ್ಸ್ ಕೊಡಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಜನರನ್ನು ಕೋರಿದರು. ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೌದ್ರಿ ರಂಗಪ್ಪ ಪರವಾಗಿ ರೋಡ್ ಶೋ ನಡೆಸಿ ಮತಯಾಚಿಸಿ ಮಾತನಾಡಿದ ಅವರು, ಚೌದ್ರಿ ರಂಗಪ್ಪ ನನಗೆ ಅಣ್ಣನ ಸಮಾನ. ಕಳೆದ 20 ವರ್ಷಗಳಿಂದ ಪಕ್ಷದಲ್ಲಿ ದುಡಿದಿದ್ದಾರೆ. 10 ವರ್ಷದ ಹಿಂದೆಯೇ ಅವರು ಶಾಸಕರಾಗಬೇಕಿತ್ತು. ಆದರೆ ಇವರಿಗೆ ತಪ್ಪಿಸಿ ಜಗ್ಗೇಶ್‍ಗೆ ಟಿಕೆಟ್ ಕೊಟ್ಟೆ. ಅವನು ಮಾರಿಕೊಂಡ ಪರಿಣಾಮ ಇದುವರೆಗೆ ಜೆಡಿಎಸ್ ಅಧಿಕಾರ ನಡೆಸಿದೆ. 15 ವರ್ಷದ ಶಾಸಕರನ್ನು ಮನೆಗೆ ಕಳಿಸಿ ಈ ಬಾರಿ ಚೌದ್ರಿ ರಂಗಪ್ಪರನ್ನು ಗೆಲ್ಲಿಸಿ ವಿಧಾನ ಸೌಧಕ್ಕೆ ಕಳಿಸಿ ಎಂದು ಮನವಿ ಮಾಡಿದರು.

ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಜನತೆಗೆ ಕೊಟ್ಟ ಮಾತುಗಳನ್ನು ಉಳಿಸಿಕೊಂಡಿದ್ದೇವೆ. ಸರ್ಕಾರಿ ನೌಕರರಿಗೆ ನ್ಯಾಯ, ಆರೋಗ್ಯ ಭಾಗ್ಯಗಳು ಒದಗಿಸಿದ್ದೇವೆ. ಒಣ ಭೂಮಿಗೆ 10ಸಾವಿರ ಸಹಾಯಧನ, ಇಂದನ ಇಲಾಖೆಯಲ್ಲಿ 25 ಸಾವಿರ ಜನರಿಗೆ ಉದ್ಯೋಗ, ಬರಗಾಲದಲ್ಲಿಯೂ 7 ಗಂಟೆ ವಿದ್ಯುತ್, ಪಾವಗಡದಲ್ಲಿ ಬೃಹತ್ ಸೋಲಾರ್ ಪ್ಲಾಂಟ್ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ ಎಂದು ಹೇಳಿದರು.

ಕನಕಪುರ ಕ್ಷೇತ್ರದಂತೆ ತಾಲ್ಲೂಕು ಅಭಿವೃದ್ದಿ :
ತುರುವೇಕೆರೆ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಅಭ್ಯರ್ಥಿ ಎಂದು ಭಾವಿಸಿ ಈ ಬಾರಿ ಚೌದ್ರಿ ರಂಗಪ್ಪರವರನ್ನು ಗೆಲ್ಲಿಸಿ ವಿಧಾನ ಸೌಧಕ್ಕೆ ಕಳಿಸಿರಿ. ನನ್ನ ಸ್ವಕ್ಷೇತ್ರ ಕನಕಪುರದಂತೆ ಈ ಕ್ಷೇತ್ರವನ್ನು ಅಭಿವೃದ್ದಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ಕಾಂಗ್ರೇಸ್ ಅಭ್ಯರ್ಥಿ ಚೌದ್ರಿ ರಂಗಪ್ಪ ಮಾತನಾಡಿ, 25 ವರ್ಷ ಕಾಂಗ್ರೆಸ್ ಪಕ್ಷಕ್ಕೆ ದುಡಿದು ಹಲವು ಬಾರಿ ಟಿಕೆಟ್ ಕೈ ತಪ್ಪಿದ್ದು ಈ ಬಾರಿ ಡಿ.ಕೆ. ಶಿವಕುಮಾರ್ ಸಹಕಾರದಿಂದ ಟಿಕೆಟ್ ಸಿಕ್ಕಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮತದಾರರು ಇದೊಂದು ಬಾರಿ ಆಶೀರ್ವದಿಸಬೇಕಾಗಿ ಮತದಾರರಲ್ಲಿ ವಿನಂತಿಸಿದರು.

ಬೆಸ್ಕಾಂ ನಿರ್ದೇಶಕ ವಸಂತ್ ಕುಮಾರ್, ಮುಖಂಡರಾದ ವಿಶ್ವೇಶ್ವರಯ್ಯ, ಗೀತಾರಾಜಣ್ಣ, ಮಾಜಿ ಜಿ.ಪಂ ಸದಸ್ಯ ಎನ್.ಆರ್.ಜಯರಾಮ್, ಅರಳಿಕೆರೆರವಿಕುಮಾರ್, ಎಂ.ಎಲ್.ಗೋವಿಂದರಾಜ್‍ಗೌಡ, ಟಿ.ಎಸ್.ದಾನೀಗೌಡ, ಸುಬ್ರಹ್ಮಣ್ಯ ಶ್ರೀಕಂಠೇಗೌಡ, ಮಂಜುನಾಥ್ ಅದ್ದೆ, ವಕೀಲ ಪ್ರವೀಣ್‍ಗೌಡ, ಪಪಂ ಸದಸ್ಯರಾದ ಕೃಷ್ಣಮೂರ್ತಿ, ಟಿ.ಎನ್.ಶಶಿಶೇಖರ್, ಟಿ.ಪಿ.ಮಹೇಶ್, ಶ್ರೀನಿವಾಸ್, ತಾಪಂ ಸದಸ್ಯರಾದ ಮಂಜುನಾಥ್, ನಂಜೇಗೌಡ, ಪ್ರಸನ್ನ ಕುಮಾರ್, ನಂಜುಂಡಯ್ಯ, ಗಿರೀಶ್, ಶಿವರಾಜು, ಸ್ವರ್ಣಕುಮಾರ್, ನಂದೀಶ್, ದೇವರಾಜು, ಕೆಂಪಲಿಂಗಯ್ಯ, ದುಂಡ ಸುರೇಶ್ ಹಲವು ಮುಖಂಡರು ಪಾಲ್ಗೊಂಡಿದ್ದರು.

Facebook Comments

Sri Raghav

Admin