ನರೇದ್ರ ಮೋದಿಯನ್ನು ಕನವರಿಸುತ್ತಿದ್ದಾರಾ ಸಿಎಂ ಸಿದ್ದರಾಮಯ್ಯ..?

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--CM
ಮಳವಳ್ಳಿ, ಮೇ 9- ಪ್ರಚಾರದ ಭರಾಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಷದ ಅಭ್ಯರ್ಥಿ ನರೇಂದ್ರಸ್ವಾಮಿಗೆ ಮತ ಹಾಕಿ ಅನ್ನುವ ಬದಲು ನರೇಂದ್ರ ಮೋದಿಗೆ ಮತಹಾಕಿ ಎಂದು ಹೇಳಿ ಪೇಚಿಗೆ ಸಿಲುಕಿದ ಘಟನೆ ನಡೆಯಿತು. ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ರೋಡ್ ಶೋ ನಡೆಸಿ ಪ್ರಚಾರ ಸಭೆಯನ್ನು ದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ನರೇಂದ್ರಸ್ವಾಮಿ ಎನ್ನುವ ಬದಲು ನರೇಂದ್ರಮೋದಿ ಎಂದು ಮೂರ್ನಾಲ್ಕು ಬಾರಿ ಮೋದಿ ಜಪ ಮಾಡಿದರು. ನರೇಂದ್ರ ಮೋದಿಗೆ ಮತ ಹಾಕಿ ಮೋದಿಗೆ ಹಾಕುವ ಒಂದೊಂದು ಮತ ನನಗೆ ಹಾಕಿದಂತೆ ಎಂದರು. ತಕ್ಷಣ ತಾವು ಮಾಡಿದ ಯಡವಟ್ಟು ಅರಿತ ಸಿದ್ದರಾಮಯ್ಯ ಅದನ್ನು ಸರಿಪಡಿಸಿಕೊಂಡು ನರೇಂದ್ರಸ್ವಾಮಿ ಎಂದು ಮತ್ತೆ ಹೇಳಿದರು.  ನರೇಂದ್ರಸ್ವಾಮಿ ಸತ್ಯ ನರೇಂದ್ರಮೋದಿ ಮಿಥ್ಯ ಎಂದು ಹೇಳಿ ತಮ್ಮ ತಪ್ಪುತಿದ್ದಿಕೊಂಡು ಸಾರ್ವಜನಿಕರನ್ನು ನಗೆಗಡಲಲ್ಲಿ ತೇಲಿಸಿದರು.

Facebook Comments

Sri Raghav

Admin