ರಸ್ತೆ ಅಪಘಾತ : ಕ್ರಿಕೆಟಿಗ ಶಾರ್ದೂಲ್ ಠಾಕೂರ್ ಪೋಷಕರು ಪಾರು

ಈ ಸುದ್ದಿಯನ್ನು ಶೇರ್ ಮಾಡಿ

Criketer-shardul
ಮುಂಬೈ,ಮೇ 9- ಮುಂಬೈನ ಪಾಲಾಗಾರ್ ರಸ್ತೆಯಲ್ಲಿ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತದಲ್ಲಿ ಭಾರತ ಕ್ರಿಕೆಟ್ ತಂಡದ ಖ್ಯಾತ ವೇಗದ ಬೌಲರ್ ಶಾರ್ದೂರ್ ಠಾಕೂರ್ ಅವರ ಪೋಷಕರು ಪಾರಾಗಿದ್ದಾರೆ. ಕಳೆದ ರಾತ್ರಿ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮೋಟಾರ್ ಬೈಕ್‍ನಲ್ಲಿ ಶಾರ್ದೂಲ್ ಪೋಷಕರಾದ ನರೇಂದ್ರ ಠಾಕೂರ್ ಹಾಗೂ ಹಸೀನಾ ಠಾಕೂರ್ ಮುಂಬೈನ ಪಾಲ್‍ಗಾರ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ.  ಅಪಘಾತ ನಡೆದ ನಂತರ ಸ್ಥಳೀಯ ದಾವ್ಲೇ ಆಸ್ಪತ್ರೆಯಲ್ಲಿ ಠಾಕೂರ್ ಪೋಷಕರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಐಪಿಎಲ್‍ನಲ್ಲಿ ಶಾರ್ದೂಲ್ ಠಾಕೂರ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ.

Facebook Comments