ಸಿಎಆರ್ ಪೊಲೀಸ್ ನೇಣಿಗೆ ಶರಣು

ಈ ಸುದ್ದಿಯನ್ನು ಶೇರ್ ಮಾಡಿ

police-hangingin
ಮೈಸೂರು, ಮೇ 9-ಕೌಟುಂಬಿಕ ಕಲಹದಿಂದ ಬೇಸತ್ತು ಸಿಎಆರ್ ಪೊಲೀಸ್ ಒಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ರವಿಕುಮಾರ್ (42) ಆತ್ಮಹತ್ಯೆ ಮಾಡಿಕೊಂಡಿರುವ ಪೊಲೀಸ್.

ನಗರದ ಪೊಲೀಸ್ ಕ್ವಾಟ್ರ್ರಸ್‍ನಲ್ಲಿ ವಾಸವಾಗಿದ್ದ ರವಿಕುಮಾರ್ ಚಾಮುಂಡಿಬೆಟ್ಟದ ಪೊಲೀಸ್ ಕಂಟ್ರೋಲ್ ರೂಮ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ನಿನ್ನೆ ರಾತ್ರಿ ಪಾಳಿ ಕೆಲಸ ಮುಗಿಸಿ ನಂದಿ ರಸ್ತೆಯಲ್ಲಿರುವ ಟವರ್‍ಗೆ ಬೆಡ್‍ಶೀಟ್ ತುಂಡಿನಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆ.ಆರ್.ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಮಹದೇವಸ್ವಾಮಿ, ಸಬ್‍ಇನ್ಸ್‍ಪೆಕ್ಟರ್ ಸುನೀಲ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin