ಕೇರಳಕ್ಕೆ ಮರಳು ಸಾಗಿಸಲು ಅವಕಾಶ ನೀಡಿ ಕೋಟಿ ಲೂಟಿ ಮಾಡಿದ್ದಾರೆ : ಮಹದೇವಪ್ಪ ವಿರುದ್ದ ಹೆಚ್ಡಿಕೆ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy

ತಿ.ನರಸೀಪುರ, ಮೇ 10- ಜನಸಾಮಾನ್ಯರು ಮನೆ, ಶೌಚಾಲಯ ನಿರ್ಮಿಸಲು ಎತ್ತಿನ ಗಾಡಿಯಲ್ಲಿ ಮರಳು ಸಾಗಾಣಿಕೆಗೆ ಅವಕಾಶ ನೀಡದೇ ರಾತ್ರೋ ರಾತ್ರಿ ಕೇರಳಕ್ಕೆ ಮರಳು ಸಾಗಿಸಲು ಅವಕಾಶ ನೀಡಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆಂದು ಸಚಿವ ಮಹದೇವಪ್ಪ ವಿರುದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ತಾಲ್ಲೂಕಿನ ಬನ್ನೂರು ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್‍ಕುಮಾರ್ ಪರ ರೋಡ್‍ಷೋ ನಡೆಸಿ ಮತಯಾಚಿಸಿ ಮಾತನಾಡಿದರು. ಕಳೆದ 20 ವರ್ಷಗಳಿಂದ ಕ್ಷೇತ್ರದಲ್ಲಿ ಆಡಳಿತ ನಡೆಸಿದ ಸಚಿವ ಮಹದೇವಪ್ಪ, ಪುತ್ರ ಸುನೀಲ್‍ಬೋಸ್ ಆಕ್ರಮ ಮರಳು ಗಣಿಗಾರಿಕೆ ನಡೆಸುವ ಮೂಲಕ ಕೊಟ್ಯಾಂತರ ರೂ.ಗಳ ಹಣ ಲೂಟಿ ಮಾಡಿದ್ದಲ್ಲದೇ ಜನಸಾಮಾನ್ಯರು ಸರ್ಕಾರದಿಂದ ಮಂಜೂರಾಗುವ ಮನೆ, ಶೌಚಾಲಯ ನಿರ್ಮಿಸಿಕೊಳ್ಳಲು ಮರಳು ಸಾಗಾಣಿಕೆಗೆ ಅವಕಾಶ ನೀಡದೇ ಬಡ ಜನರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದರು.

ತಮ್ಮ ಆಡಳಿತಾವಧಿಯಲ್ಲಿ ಕ್ಷೇತ್ರದ ಜನರ ಕಷ್ಟ ಸುಖಗಳಿಗೆ ಸ್ಪಂದಿಸದ ಸಚಿವರು ಕ್ಷೇತ್ರದಲ್ಲಿ ಮಗನನ್ನು ದರ್ಬಾರ್ ನಡೆಸಲು ಬಿಟ್ಟು ನಿರಂತರ ದುರಾಡಳಿತವನ್ನು ನಡೆಸಿದರೆಂದು ದೂರಿದರು. ಮುಖಂಡರಾದ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಎಸ್.ಸಿದ್ದಾರ್ಥ, ಬನ್ನೂರು ಹೋಬಳಿ ಕಾರ್ಯಧ್ಯಕ್ಷ ಮಂಜುನಾಥ್, ದೀಪ್ ದರ್ಶನ್ ಹಾಜರಿದ್ದರು.

Facebook Comments

Sri Raghav

Admin