ಪಕ್ಕದಲ್ಲಿ ಭ್ರಷ್ಟಾಚಾರಿಗಳನ್ನು ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ ಮೋದಿ : ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul--01
ಬೆಂಗಳೂರು, ಮೇ 10- ಮೂವತ್ತೈದು ಸಾವಿರ ಕೋಟಿ ಅಕ್ರಮ ಗಣಿಗಾರಿಕೆ ಮಾಡಿದ ರೆಡ್ಡಿ ಸಹೋದರರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಗೆ ಯಾವ ನೈತಿಕತೆ ಇದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕರ್ನಾಟಕದ ಸಮಸ್ಯೆ ಬಗ್ಗೆ ಮಾತನಾಡುವುದಿಲ್ಲ ಎಂದು ಟೀಕಿಸಿದರಲ್ಲದೆ ಮಹದಾಯಿ ನದಿ ನೀರು ವಿವಾದವನ್ನು ಪ್ರಧಾನಿಯವರೇ ಬಗೆಹರಿಸಬೇಕೆಂದು ಹೇಳಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ನಾವು ರೈತರ ಸಾಲಮನ್ನಾ ಮಾಡಿದ್ದೇವೆ. ಆದರೆ ಬಿಜೆಪಿಯವರು ಸಾಲ ಮನ್ನಾ ಮಾಡಲು ಮುಂದಾಗಲಿಲ್ಲ. ಮೋದಿ ಅವರು ತಮಗೆ ಬೇಕಾದಾಗ ವಿದೇಶಕ್ಕೆ ಹೋಗುತ್ತಾರೆ. ಮೋದಿ ಅವರ ಚೀನಾ ಭೇಟಿ ಹಿಂದೆ ಯಾವುದೇ ಅಜೆಂಡಾ ಇರಲಿಲ್ಲ . ಚೀನಾ ಭೇಟಿ ಸಂದರ್ಭದಲ್ಲಿ ಡೊಕ್ಲಾಮ್ ಚರ್ಚೆ ನಡೆದಿಲ್ಲ ಎಂದು ಹೇಳಿದರು.

ನಾನು ಮಂದಿರ,ಮಸೀದಿ, ಗುರದ್ವಾರ ಸೇರಿದಂತೆ ಎಲ್ಲ ಕಡೆ ಹೋಗುತ್ತೇನೆ. ನನಗೆ ಹಿಂದು ಧರ್ಮದ ಬಗ್ಗೆ ನನ್ನದೇ ಆದ ಪರಿಕಲ್ಪನೆ ಇದೆ. ಬಿಜೆಪಿಯವರಿಗೆ ಹಿಂದು ಎಂಬ ಪದದ ಅರ್ಥವೇ ತಿಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು.  ಯಡಿಯೂರಪ್ಪ ಅವರ ಮುಖವನ್ನು ಒಮ್ಮೆ ನೋಡಿ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖವನ್ನು ನೋಡಿ. ಯಾರಿಗೆ ಮತ ಚಲಾಯಿಸಬೇಕೆಂದು ಅನಿಸುತ್ತದೋ ನೀವೇ ನಿರ್ಧರಿಸಿ ಎಂದರು. ನನ್ನನ್ನು ಎಲೆಕ್ಷನ್ ಹಿಂದು ಎಂದು ಕರೆಯುತ್ತಾರೆ. ಅವರು ಹೇಗೆ ಬೇಕಾದರೂ ಕರೆದುಕೊಳ್ಳಲಿ ಅದು ಅವರವರಿಗೆ ಬಿಟ್ಟಿದ್ದು , ನಮಗೆ ಕರ್ನಾಟಕದಲ್ಲಿ ಪ್ರಬಲವಾದ ಶಕ್ತಿ ಇದೆ ಎಂದು ಹೇಳಿದರು.

ಕರ್ನಾಟಕದ ಜನತೆ ರಾಜಕೀಯವಾಗಿ ಪ್ರಬುದ್ಧವಾಗಿದ್ದಾರೆ. ಐದು ವರ್ಷಗಳ ನಮ್ಮ ಸರ್ಕಾರದ ಸಾಧನೆಯನ್ನು ಜನತೆಯ ಮುಂದಿಟ್ಟಿದ್ದೇನೆ. ನಮ್ಮ ಜನಪರ ಯೋಜನೆಗಳ ಆಧಾರದಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Facebook Comments

Sri Raghav

Admin