ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ತಂದೆಯ ಮುಂದುಗಡೆ ನಿಂತಿದ್ದರೆ ಶೋಭಿಸುವಂತೆ, ಸಿಂಹಾಸನದಲ್ಲಿ ಕುಳಿತಿದ್ದರೆ ಶೋಭಿಸುವುದಿಲ್ಲ. ತಂದೆಯ ಪಾದಗಳನ್ನು ಒತ್ತುತ್ತಿರುವಾಗ ಉಂಟಾಗುವ ಸುಖವು ರಾಜ್ಯವನ್ನು ಆಳಿದರೆ ಬರುವುದಿಲ್ಲ. ತಂದೆಯು ಊಟ ಮಾಡಿದ ಮೇಲೆ ಊಟ ಮಾಡುವುದರಲ್ಲಿರುವ ತೃಪ್ತಿಯು ಮೂರು ಲೋಕಗಳನ್ನು ಆಳಿದರೂ ಬರುವುದಿಲ್ಲ. ತಂದೆಯನ್ನು ಬಿಟ್ಟವನಿಗೆ ರಾಜ್ಯವು ಹೊರೆಯೇಹೊರತು ಅದರಲ್ಲಿ ಯಾವ ಗುಣವೂ ಇಲ್ಲ -ನಾಗಾನಂದ

Rashi

ಪಂಚಾಂಗ : 11.05.2018 ಶುಕ್ರವಾರ

ಸೂರ್ಯ ಉದಯ ಬೆ.05.56 / ಸೂರ್ಯ ಅಸ್ತ ಸಂ.06.37
ಚಂದ್ರ ಉದಯ ರಾ.3.29 / ಚಂದ್ರ ಅಸ್ತ ಮ.02.58
ವಿಲಂಬಿ ಸಂವತ್ಸರ / ಉತ್ತರಾಯಣ ವಸಂತ ಋತು / ವೈಶಾಖ ಮಾಸ
ಕೃಷ್ಣ ಪಕ್ಷ / ತಿಥಿ : ಏಕಾದಶಿ (ರಾ.11.42) / ನಕ್ಷತ್ರ: ಪೂರ್ವಭಾದ್ರ (ಮ.1.25)
ಯೋಗ: ವೈಧೃತಿ (ಮ.1.45) / ಕರಣ: ಭವ-ಬಾಲವ (ಬೆ.11.41-ರಾ.11.42)
ಮಳೆ ನಕ್ಷತ್ರ: ಕೃತ್ತಿಕಾ ಪ್ರವೇಶ (ರಾ.11.46)/ ಮಾಸ: ಮೇಷ / ತೇದಿ: 28

ಇಂದಿನ ವಿಶೇಷ :  ಅಪರ ಏಕಾದಶಿ

ರಾಶಿ ಭವಿಷ್ಯ  :  

ಮೇಷ: ಪ್ರಯಾಣದ ಯೋಜನೆ ಕೊನೆಗಳಿಗೆಯಲ್ಲಿ ಬದಲಾಗಲಿದೆ.
ವೃಷಭ: ಕುಟುಂಬದ ಸದಸ್ಯರು ನಿಮ್ಮ ನಿರೀಕ್ಷೆಗಳನ್ನು ಪೂರೈಸಲಿದ್ದಾರೆ.
ಮಿಥುನ: ಪ್ರೀತಿಪಾತ್ರರು ನಿಮ್ಮ ಬಗ್ಗೆ ನಿರ್ಲಕ್ಷ ತೋರಲಿದ್ದಾರೆ.
ಕರ್ಕ: ಹಣಕಾಸು ವ್ಯವಹಾರದಲ್ಲಿ ಲಾಭ.
ಸಿಂಹ: ನಿಮ್ಮ ಆಯ್ಕೆ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ.
ಕನ್ಯಾ: ನಿಮ್ಮ ಸಂಗಾತಿಯ ಆರೋಗ್ಯ ಸ್ಥಿತಿ ಏರುಪಾರಾಗಲಿದೆ.
ತುಲಾ: ಮಹಿಳಾ ಸದಸ್ಯರು ನಿಮ್ಮ ಕ್ಷೇತ್ರದಲ್ಲಿನ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸುತ್ತಾರೆ .
ವೃಶ್ಚಿಕ: ರಹಸ್ಯ ಶತ್ರುಗಳು ನಿಮ್ಮ ಬಗ್ಗೆ ವದಂತಿ ಹರಡಲು ಉತ್ಸುಕರಾಗಿರುತ್ತಾರೆ.
ಧನುರ್: ಆರೋಗ್ಯದ ಕಡೆ ಗಮನಹರಿಸಿ.
ಮಕರ: ನಿಮ್ಮ ಇಷ್ಟಾನಿಷ್ಟಗಳ ಪ್ರಕಾರ ಎಲ್ಲರೂ ಕೆಲಸ ಮಾಡುತ್ತಾರೆಂದು ನಿರೀಕ್ಷಿಸಬೇಡ.
ಕುಂಭ: ಮಡದಿಯಿಂದ ಕಿರಿಕಿರಿ ಉಂಟಾಗಲಿದೆ.
ಮೀನ: ಸಾಮಾಜಿಕ ಕೂಟಗಳಲ್ಲಿ ನಿಮ್ಮ ಹಾಸ್ಯದ ಪ್ರವೃತ್ತಿ ನಿಮ್ಮನ್ನು ಜನಪ್ರಿಯಗೊಳಿಸುತ್ತದೆ.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin