ಎಲ್ಲ ಕೋರ್ಟ್‍ಗಳಲ್ಲೂ ಲೈಂಗಿಕ ಕಿರುಕುಳ ನಿಗ್ರಹ ಸಮಿತಿ ರಚಿಸುವಂತೆ ಸುಪ್ರೀಂ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

supreme-ocurt
ನವದೆಹಲಿ, ಮೇ 11- ಇನ್ನೆರಡು ತಿಂಗಳೊಳಗೆ ದೇಶದ ಎಲ್ಲ ನ್ಯಾಯಾಲಯಗಳಲ್ಲೂ ಲೈಂಗಿಕ ಕಿರುಕುಳ ನಿಗ್ರಹ ಸಮಿತಿಗಳನ್ನು ರಚಿಸುವಂತೆ ಮುಖ್ಯ ನ್ಯಾಯಮೂರ್ತಿಗಳು ಅಥವಾ ಉಸ್ತುವಾರಿ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂಕೋರ್ಟ್ ಇಂದು ಸೂಚನೆ ನೀಡಿದೆ.2013ರ ಕಾನೂನಿಗೆ ಅನುಗುಣವಾಗಿ ದೇಶದ ಎಲ್ಲ ಹೈಕೋರ್ಟ್‍ಗಳು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಘಟಕಗಳನ್ನು ರಚಿಸಬೇಕೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠ ಆದೇಶಿಸಿದೆ. ಈ ಸಂಬಂಧ ಸಲ್ಲಿಸಲಾದ ಅರ್ಜಿಯೊಂದರ ವಿಚಾರಣೆ ನಡೆಸಿದ ಪೀಠವು ಈ ಆದೇಶ ನೀಡಿ ಎಲ್ಲ ವಿಧದ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ನಿಗ್ರಹ ಕುರಿತ ವಿಚಾರಣೆಗಳಿಗೆ ಈ ಸಮಿತಿ ನೆರವಾಗಬೇಕೆಂದು ಸೂಚಿಸಿತು.

Facebook Comments

Sri Raghav

Admin