ಚಾಮುಂಡಿಬೆಟ್ಟದಲ್ಲಿ ಸುಟ್ಟು ಕರಕಲಾದ ಶವ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Women-Fire--01
ಮೈಸೂರು, ಮೇ 11- ಚಾಮುಂಡಿಬೆಟ್ಟದ ಸಮೀಪ ಸುಟ್ಟು ಕರಕಲಾದ ವ್ಯಕ್ತಿಯ ಶವ ಪತ್ತೆಯಾಗಿದ್ದು, ಬೆಟ್ಟದ ತಪ್ಪಲಿನ ಸುತ್ತಮುತ್ತಲ ವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಚಾಮುಂಡಿಬೆಟ್ಟದ ಉತ್ತರಹಳ್ಳಿಗೆ ಹೋಗುವ ಮಾರ್ಗಮಧ್ಯದಲ್ಲಿ ಬೆಳಗ್ಗೆ ಶವ ಪತ್ತೆಯಾಗಿದೆ. ವ್ಯಕ್ತಿಯೊಬ್ಬರು ಈ ರಸ್ತೆಯಲ್ಲಿ ಹೋಗುತ್ತಿದ್ದಾಗ ಸುಟ್ಟು ಹೋಗುತ್ತಿದ್ದ ವ್ಯಕ್ತಿಯ ದೇಹ ಕಾಣಿಸಿದೆ. ದೇಹದಿಂದ ಇನ್ನೂ ಹೊಗೆ ಬರುತ್ತಿದ್ದುದನ್ನು ಕಂಡು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.

ಶವದ ಬಳಿ ಗುರುತಿನ ಚೀಟಿ ಸಿಕ್ಕಿದ್ದು, ಅದರಲ್ಲಿ ವಾಜಮಂಗಲದ ವಾಸಿ ಕಿರಣ್ ಎಂದು ಬರೆಯಲಾಗಿದೆ. ಹಾಗಾಗಿ ಕಿರಣ್‍ದೇ ಶವ ಇರಬಹುದು. ಎಲ್ಲೋ ಕೊಲೆ ಮಾಡಿ ಇಲ್ಲಿ ತಂದು ಸುಟ್ಟಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಕೆಆರ್ ಠಾಣೆ ಇನ್ಸ್‍ಪೆಕ್ಟರ್ ಮಹದೇವಸ್ವಾಮಿ, ಸಬ್‍ಇನ್ಸ್‍ಪೆಕ್ಟರ್ ಸುನಿಲ್ ಆಗಮಿಸಿ ಪರಿಶೀಲನೆ ನಡೆಸಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ವೈಯಕ್ತಿಕ ದ್ವೇಷದಿಂದ ಆದ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ವರದಿ ಬಂದ ನಂತರ ಗೊತ್ತಾಗಲಿದೆ.

Facebook Comments

Sri Raghav

Admin