ನಾಳೆ ಬೆಳಗ್ಗೆ 7 ರಿಂದ ಸಂಜೆ 6.30ರವರೆಗೆ ಸಮೀಕ್ಷೆಗಳಿಗೆ ನಿರ್ಬಂಧ

ಈ ಸುದ್ದಿಯನ್ನು ಶೇರ್ ಮಾಡಿ

Election-Survay
ನವದೆಹಲಿ/ಬೆಂಗಳೂರು, ಮೇ 11-ನಾಳೆ ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 7 ರಿಂದ ಸಂಜೆ 6.30ರವರೆಗೆ ಮತದಾನದ ಅವಧಿಯಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಯಾವುದೇ ರೀತಿಯ ಮತಗಟ್ಟೆ (ಎಗ್ಸಿಟ್ ಪೋಲ್) ಸಮೀಕ್ಷೆ ನಡೆಸುವುದಕ್ಕೆ ಕೇಂದ್ರ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ.

ಈ ಅವಧಿಯಲ್ಲಿ ಯಾವುದೇ ವಾರ್ತಾ ಪತ್ರಿಕೆಗಳಾಗಲಿ, ಸುದ್ದಿವಾಹಿನಿಗಳಾಗಲಿ ಅಥವಾ ಇತರ ವಿದ್ಯುನ್ಮಾನ ಮಾಧ್ಯಮಗಳಾಗಲಿ, ಯಾವುದೇ ಸ್ವರೂಪದ ಮತಗಟ್ಟೆ ಸಮೀಕ್ಷೆ ನಡೆಸದಂತೆ ಸ್ಪಷ್ಟಸೂಚನೆ ನೀಡಿದೆ.
ಯಾವುದೇ ಅಭಿಪ್ರಾಯ ಸಮೀಕ್ಷೆ, ಜನಮತ ಗಣನೆ ಫಲಿತಾಂಶ ಅಥವಾ ಯಾವುದೇ ಇತರ ರೀತಿಯ ಸಮೀಕ್ಷೆ/ಸರ್ವೆಗಳೂ ಸೇರಿದಂತೆ ಇದಕ್ಕೆ ಸಂಬಂಧಪಟ್ಟ ಯಾವುದೇ ವಿಷಯವನ್ನು ಮತದಾನ ಅವಧಿಯಲ್ಲಿ ಪ್ರಕಟಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಎನ್.ಟಿ. ಭುಟಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸೂಚನೆಯನ್ನು ಎಲ್ಲ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.

Facebook Comments

Sri Raghav

Admin