ಬಾಳೇಗೌಡ ಸೇರಿದಂತೆ ಮೂರು ಮಂದಿಗೆ 10ರಿಂದ 20 ಲಕ್ಷ ರೂ.ವರೆಗೂ ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

Accident-03
ಬೆಂಗಳೂರು, ಮೇ 11- ಬಾಗಲಕೋಟೆ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಡಿವೈಎಸ್‍ಪಿ ಬಾಳೇಗೌಡ ಸೇರಿದಂತೆ ಮೂರು ಮಂದಿ ಕುಟುಂಬ ವರ್ಗದವರಿಗೆ 10ರಿಂದ 20 ಲಕ್ಷ ರೂ.ವರೆಗೂ ಎಕ್ಸ್‍ಗ್ರೇಷಿಯಾವನ್ನು ಭಾರತದ ಚುನಾವಣಾ ಆಯೋಗ ನೀಡಲಿದೆ. ಅಪಘಾತದಲ್ಲಿ ಡಿವೈಎಸ್‍ಪಿ ಬಾಳೇಗೌಡ, ಇನ್ಸ್‍ಪೆಕ್ಟ್ ಶಿವಸ್ವಾಮಿ, ಚಾಲಕ ಗೃಹರಕ್ಷಕ ದಳದ ವೇಣುಗೋಪಾಲ್ ಮೃತಪಟ್ಟಿದ್ದರು. ಈ ಮೂರು ಮಂದಿ ಕುಟುಂಬದವರಿಗೆ ಆಯೋಗದ ಮಾರ್ಗಸೂಚಿ ಪ್ರಕಾರ ಎಕ್ಸ್‍ಗ್ರೇಷಿಯಾ ನೀಡಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಚುನಾವಣಾ ಕಾರ್ಯಕ್ಕಾಗಿ ತೆರಳುತ್ತಿದ್ದ ವೇಳೆ ಬಾಗಲಕೋಟೆ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಈ ಮೂರು ಮೃತಪಟ್ಟಿದ್ದರು. ಚುನಾವಣಾ ಕಾರ್ಯದಲ್ಲಿ ನಿಯೋಜನೆಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಗೆ ಆಯೋಗ 10ಲಕ್ಷದಿಂದ 20ಲಕ್ಷದವರೆಗೂ ಪರಿಹಾರ ಧನ ನಿಗದಿಪಡಿಸಿದೆ.

Facebook Comments

Sri Raghav

Admin