ಮತದಾರರಿಗೆ ಖೋಟಾನೋಟು ಹಂಚಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Fake-Notes
ರಾಯಚೂರು,ಮೇ 11- ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ಹಣದ ಆಮಿಷವೊಡ್ಡಿ ನಕಲಿ ನೋಟುಗಳನ್ನು ಹಂಚಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ನಡೆದಿದೆ. ನಿನ್ನೆರಾತ್ರಿ 500 ಮುಖಬೆಲೆಯ ಮೂರು ಖೋಟಾ ನೋಟು ಚಲಾವಣೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ವಿವಿಧೆಡೆ ಮತದಾರರಿಗೆ ಖೋಟಾ ನೋಟು ಹಂಚಿಕೆ ಮಾಡಲಾಗಿದೆ. ಬಾರ್, ಪೆಟ್ರೋಲ್ ಬಂಕ್, ಡಾಬಾಗಳಲ್ಲಿ ಖೋಟಾ ನೋಟುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin