ಮನೆಯಲ್ಲಿ ಆಗ್ನಿ ಆಕಸ್ಮಿಕದಿಂದ ಸುಟ್ಟು ಕರಕಲಾದ ವೃದ್ದ ದಂಪತಿ

ಈ ಸುದ್ದಿಯನ್ನು ಶೇರ್ ಮಾಡಿ

Fire--01

ನವದೆಹಲಿ, ಮೇ 11-ಮನೆಯಲ್ಲಿ ಆಗ್ನಿ ಆಕಸ್ಮಿಕದಿಂದ ವೃದ್ದ ದಂಪತಿ ಜೀವಂತ ದಹನವಾದ ದುರಂತ ಪಶ್ಚಿಮ ದೆಹಲಿಯ ಮೋತಿ ನಗರದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಚೇಡಿ ಲಾಲ್(70) ಮತ್ತು ಅವರ ಪತ್ನಿ ಲಕ್ಷ್ಮೀ(62) ಬೆಂಕಿ ದುರ್ಘಟನೆಯಲ್ಲಿ ಸುಟ್ಟು ಕರಕಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು 3.25ರ ನಸುಕಿನಲ್ಲಿ ಕರೆ ಸ್ವೀಕರಿಸಿ, ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದೇವು. ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸಿದರು. ನಂತರ ದಂಪತಿ ಸಜೀವ ದಹನಗೊಂಡಿರುವುದು ಪತ್ತೆಯಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin