ನಿಮ್ಮ ಮತ, ನಿಮ್ಮ ಅಧಿಕಾರ, ತಪ್ಪದೆ ಅದನ್ನು ಚಲಾಯಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Voting--001

ಬ್ಯಾಲೆಟ್ ಬಾಕ್ಸ್ (ಮತ ಪೆಟ್ಟಿಗೆ) ಬುಲೆಟ್‍ ಗಿಂತಲೂ ಬಲಶಾಲಿ ಎಂದು ಅಮೆರಿಕ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ಹೇಳಿರುವ ಮಾತು ಅಕ್ಷರಶ: ನಿಜ. ನಮ್ಮ ಸಂವಿಧಾನವು ಪ್ರಜೆಗಳಿಗೆ ನೀಡಿದ ಮೂಲಭೂತ ಹಕ್ಕುಗಳಲ್ಲಿ ಮತದಾನವೂ ಒಂದು. ನಾವು ಚಲಾಯಿಸುವ ಆ ಒಂದು ಮತದಲ್ಲಿ ಅದ್ಭುತ ಪವರ್ ಅಡಗಿದೆ. ಆ ಒಂದು ಮತ ನಮ್ಮ ದೇಶದ ಭವಿಷ್ಯವನ್ನೇ ನಿರ್ಧರಿಸುತ್ತದೆ.  ಒಬ್ಬ ಪ್ರಜೆ ತನ್ನ ಮತವನ್ನು ಚಲಾಯಿಸುವುದರ ಮೂಲಕ ಒಬ್ಬ ಜನಪ್ರತಿನಿಧಿಯನ್ನು ಚುನಾಯಿಸುತ್ತಾನೆ. ಹಾಗೆಯೇ ಆತನ ಮತವೇ ಒಂದು ಪಕ್ಷ ಅಧಿಕಾರಕ್ಕೆ ಬರಲೂ ಕಾರಣವಾಗುತ್ತದೆ. ಪ್ರಜೆಗಳ ಮನ್ನಣೆ ಇಲ್ಲದೆ ಯಾವ ಪಕ್ಷವೂ ಅಧಿಕಾರಕ್ಕೆ ಬರಲಾರದು. ಹಾಗೆಯೇ ಯಾವ ಪ್ರತಿನಿಧಿಯೂ ಚುನಾಯಿತನಾಗಲು ಸಾಧ್ಯವಾಗಲಾರದು. ಪ್ರಜಾತಂತ್ರದಲ್ಲಿ ಅಷ್ಟೊಂದು ಶಕ್ತಿಯನ್ನು ಒಬ್ಬ ಮತದಾರ ಪಡೆದಿದ್ದಾನೆ.

ಮತದಾರನ ಮತಕ್ಕೆ ಇಷ್ಟೊಂದು ಶಕ್ತಿ ಇರುವುದರಿಂದಲೇ ಆ ತನ್ನ ಹಕ್ಕನ್ನು ಸರಿಯಾಗಿ, ಯೋಗ್ಯ ರೀತಿಯಲ್ಲಿ ಚಲಾಯಿಸುವುದು ಅವಶ್ಯವಾಗಿದೆ. ಮತ ಚಲಾಯಿಸುವುದಕ್ಕೂ ಮೊದಲು ಪ್ರಜೆ ಸಾಕಷ್ಟು ಆಲೋಚಿಸಿ ಮತ ಹಾಕಬೇಕು. ಒಳ್ಳೆಯ ಪ್ರತಿನಿಧಿಗಳನ್ನು ಆರಿಸಿದರೆ ಆತ ಸಮಾಜಕ್ಕೆ ಸೇವೆ ಸಲ್ಲಿಸಿದಂತಾಗುತ್ತದೆ. ಅವನು ತನ್ನ ಮತದಿಂದಲೇ ಸಮಾಜವನ್ನು ಸುಧಾರಿಸಬಲ್ಲ. ಬೇಜವಾಬ್ದಾರಿ ಯಿಂದ ವರ್ತಿಸಿದರೆ ತನ್ನ ಮತದಿಂದ ಆ ಸಮಾಜದ ಅವನತಿಗೂ ಅವನೇ ಕಾರಣನಾಗಬಲ್ಲ. ನಮ್ಮ ಭವಿಷ್ಯ, ನಮ್ಮ ಮಕ್ಕಳ ಭವಿಷ್ಯ, ನಮ್ಮ ಸಮಾಜದ ಭವಿಷ್ಯ ಹಾಗೂ ನಮ್ಮ ದೇಶದ ಭವಿಷ್ಯ ಎಲ್ಲವೂ ನಾವು ಹಾಕುವ ಮತದಲ್ಲೇ ಅಡಗಿದೆ ಎನ್ನುವುದು ಸದಾ ನೆನಪಿನಲ್ಲಿಡಿ.

Facebook Comments

Sri Raghav

Admin