ಪಂಚಾಯಿತಿ ಚುನಾವಣೆಗೆ ಮುನ್ನ ಹಿಂಸೆ, ಕೊಲೆ : ಟಿಎಂಸಿ ನಾಯಕ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

West-Bengal
ಭಾನ್‍ಗೊರ್, ಮೇ 12-ಪಶ್ಚಿಮ ಬಂಗಾಳದಲ್ಲಿ ಮೇ 14ರಂದು ನಡೆಯುವ ಪಂಚಾಯತಿ ಚುನಾವಣೆಗಳಿಗೆ ಮುನ್ನವೇ ಹಲವೆಡೆ ಹಿಂಸಾಚಾರ ಭುಗಿಲೆದ್ದಿದೆ. ಸೌತ್ 24 ಪರಗಣ ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗನೊಬ್ಬನ ಕೊಲೆ ಪ್ರಕರಣದ ಸಂಬಂಧ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪ್ರಬಲ ನಾಯಕ ಅರಬುಲ್ ಇಸ್ಲಾಂರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಶೀಪುರ್‍ನಿಂದ ಮಚ್ಚಿಭಾಂಗ ಪ್ರದೇಶಕ್ಕೆ ಸ್ವತಂತ್ರ ಅಭ್ಯರ್ಥಿ ಪರವಾಗಿ ನಿನ್ನೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಹಫಿಜುಲ್ ಇಸ್ಲಾಂ ಮೊಲ್ಲಾ(25) ಎಂಬ ಕಾರ್ಯಕರ್ತನ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಈ ಹತ್ಯೆ ಪ್ರಕರಣದಲ್ಲಿ ಅರಬುಲ್ ಇಸ್ಲಾಂ ಹೆಸರ ಪ್ರಮುಖವಾಗಿ ಕೇಳಿಬಂದಿತ್ತು. ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆದೇಶದ ಮೇರೆಗೆ ಆರೋಪಿ ಇಸ್ಲಾಂನನ್ನು ಬಂಧಿಸಲಾಗಿದೆ.

Facebook Comments

Sri Raghav

Admin