ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ಈ ಸುದ್ದಿಯನ್ನು ಶೇರ್ ಮಾಡಿ

ರಾಯಚೂರು. ಮೇ. 12 : ತಮ್ಮ ನಡುಗಡ್ಡೆಗೆ ಸೇತುವೆ ಸಂಪರ್ಕ ಕಲ್ಪಿಸಿ ಹಾಗೂ ಊರಲ್ಲಿ ಒಂದು ನ್ಯಾಯಬೆಲೆ ಅಂಗಡಿ ಆರಂಭಿಸುವಂತೆ ಆಗ್ರಹಿಸಿ ಲಿಂಗಸಗೂರು ತಾಲ್ಲೂಕಿನ ನಡುಗಡ್ಡೆ ಗ್ರಾಮ ಕಡದರಗಡ್ಡೆ ಜನ ಮತದಾನ ಬಹಿಷ್ಕರಿಸಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಎಂಬುದು ಜನರ ಆಗ್ರಹ ಸ್ಥಳಕ್ಕೆ ಬಂದ ತಹಶೀಲ್ದಾರ ಗ್ರಾಮದಲ್ಲಿನ ಸರಕಾರಿ ನೌಕರರು ಹಾಗೂ ಪಂಚಾಯ್ತ ಉದ್ಯೋಗಿಗಳನ್ನು ಒತ್ತಾಯ ಪೂರ್ವಕವಾಗಿ ಮತಹಾಕಿಸಿದರು. ಇದು ತಿಳಿಯುತ್ತಿದ್ದಂತೆಯೇ ಇಡೀ ಗ್ರಾಮದ ಜನ ಆಕ್ರೋಶ ಗೊಂಡಿದ್ದು ತಹಶಿಲ್ದಾರರನ್ನು ಗ್ರಾಮದಲ್ಲಿ ಕೂಡಿಹಾಕಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. (ರಾಜ್ಯ  ವಿಧಾನಸಭಾ ಚುನಾವಣೆ : ಮತದಾನದ Live Updates )

Vote

Facebook Comments

Sri Raghav

Admin