ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡಿದ ಸಾರ್ವಜನಿಕರು

ಈ ಸುದ್ದಿಯನ್ನು ಶೇರ್ ಮಾಡಿ

Mejestic-01
ಬೆಂಗಳೂರು, ಮೇ 12-ಚುನಾವಣಾ ಕರ್ತವ್ಯಕ್ಕಾಗಿ ಸಾವಿರಾರು ಬಸ್‍ಗಳನ್ನು ಬಳಸಿಕೊಂಡಿದ್ದರಿಂದ ಸಾರ್ವಜನಿಕರು ಸಂಚಾರಕ್ಕಾಗಿ ಪರದಾಡುವಂತಾಯಿತು.
ದೂರದ ಊರುಗಳಿಗೆ ಮತ ಹಾಕಲು ಹೋಗಬೇಕಿದ್ದ ಜನ ಬಸ್‍ಗಳಿಲ್ಲದೆ ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ಕಾಯುತ್ತಾ ನಿಂತಿದ್ದರು. ಖಾಸಗಿ ಸಾರಿಗೆ ಹೊರತುಪಡಿಸಿದರೆ ಸರ್ಕಾರಿ ಬಸ್‍ಗಳು ಬಹುತೇಕ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದವು. ಹೀಗಾಗಿ ರಸ್ತೆಗಳು ಕೂಡ ಬಿಕೋ ಎನ್ನುತ್ತಿದ್ದವು.   ಸಾರಿಗೆ ಬಸ್‍ಗಳ ಸೇವೆ ಕಡಿಮೆ ಇದ್ದುದರಿಂದ ಖಾಸಗಿಯವರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದು, ಕೆಲವೆಡೆ ಪ್ರಯಾಣಿಕರು ವಾಗ್ದಾದಕ್ಕಿಳಿದ ಪ್ರಸಂಗವೂ ಜರುಗಿದೆ. (ರಾಜ್ಯ  ವಿಧಾನಸಭಾ ಚುನಾವಣೆ : ಮತದಾನದ Live Updates )

ಚುನಾವಣಾ ಕರ್ತವ್ಯದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಬಿಡಿಸಿಕೊಂಡಿದ್ದರಿಂದ ನಿನ್ನೆಯೇ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇಂದು ಚುನಾವಣೆ ಕಾರಣಕ್ಕಾಗಿ ರಜೆ ಘೋಷಿಸಲಾಗಿದೆ. ನಾಳೆ ಭಾನುವಾರ ರಜೆಯಾಗಿರುವುದರಿಂದ ಒಟ್ಟು ಮೂರು ದಿನಗಳ ರಜೆಯ ಮಜೆ ಅನುಭವಿಸಲು ಬಹಳಷ್ಟು ಕುಟುಂಬಗಳು ಪರಿವಾರ ಸಮೇತರಾಗಿ ಪ್ರವಾಸಕ್ಕೆ ತೆರಳಿದರು.

ಮತದಾನಕ್ಕೆ ಸ್ಪಂದಿಸಿದ ವಾತಾವರಣ: ನಿನ್ನೆ ರಾತ್ರಿ ಮಳೆ ಸುರಿದಿದ್ದರಿಂದ ಇಂದು ಬೆಳಗ್ಗೆ ಮತದಾನದ ಮೇಲೆ ಆತಂಕದ ಛಾಯೆ ಕವಿದಿತ್ತು. ಆದರೆ ಬೆಳಗ್ಗೆಯಿಂದ ಯಾವುದೇ ಮಳೆಯ ಮುನ್ಸೂಚನೆಯಿಲ್ಲದೆ, ಮತದಾನ ಸರಾಗವಾಗಿ ಆರಂಭಗೊಂಡಿತು. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಾಗ ಅಹ್ಲಾದಕರ ವಾತಾವರಣವಿತ್ತು. ಆನಂತರ ಬಿಸಿಲು ಏರತೊಡಗಿತ್ತು. ಬೆಳಗ್ಗೆ ಜನರಲ್ಲಿ ಮತದಾನಕ್ಕೆ ಹೆಚ್ಚು ಉತ್ಸಾಹ ಕಂಡುಬಂತು. ಮಧ್ಯಾಹ್ನದ ವೇಳೆಗೆ ಬಿಸಿಲು ತೀವ್ರಗೊಂಡ ಪರಿಣಾಮ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕಿದರು.

Facebook Comments

Sri Raghav

Admin