ಹಕ್ಕು ಚಲಾಯಿಸಿದ ಸ್ಯಾಂಡಲ್‍ವುಡ್ ಸಿನಿಮಾ ತಾರೆಯರು

ಈ ಸುದ್ದಿಯನ್ನು ಶೇರ್ ಮಾಡಿ

53a23c0d502fee500b78fd1960f4c5c9
ಬೆಂಗಳೂರು, ಮೇ 12- ಸ್ಯಾಂಡಲ್‍ವುಡ್ ನಟ-ನಟಿಯರು ತಮ್ಮ ಹಕ್ಕು ಚಲಾಯಿಸಲು ಮುಂಚೂಣಿಯಲ್ಲಿದ್ದರು. ಇಂದು ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿದ ನಟ-ನಟಿಯರು ಹಿರಿ-ಕಿರಿ ತೆರೆಯ ಕಲಾವಿದರು ಮತಗಟ್ಟೆಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಸದಾಶಿವನಗರದಲ್ಲಿ ಪುನಿತ್ ರಾಜ್‍ಕುಮಾರ್, ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಹೆಬ್ಬಾಳದಲ್ಲಿ ಮತದಾನ ಮಾಡಿದರೆ, ರಾಜಾಜಿನಗರದಲ್ಲಿ ರವಿಚಂದ್ರನ್ ತಮ್ಮ ಪತ್ನಿ ಜತೆ ಆಗಮಿಸಿ ಮತ ಚಲಾಯಿಸಿದರು.

WhatsApp Image 2018-05-12 at 11.17.46 AM

IMG-20180512-WA0275 ಪದ್ಮನಾಭನಗರದಲ್ಲಿ ನಟ ರಮೇಶ್ ಮತಗಟ್ಟೆಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಹಿರಿಯ ನಟಿ ಸರೋಜಾದೇವಿ ಬೆಂಗಳೂರಿನಲ್ಲಿ ಮತದಾನ ಮಾಡಿದರೆ, ನೆಲಮಂಗಲದಲ್ಲಿ ಹಿರಿಯ ನಟಿ ಲೀಲಾವತಿ ತಮ್ಮ ಮಗ ವಿನೋದ್‍ರಾಜ್‍ಕುಮಾರ್ ಅವರೊಂದಿಗೆ ಬಂದು ಮತದಾನ ಮಾಡಿದರು. ಕತ್ರಿಗುಪ್ಪೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪತ್ನಿ ಪ್ರಿಯಾಂಕಾ ಉಪೇಂದ್ರ ಜತೆ ಆಗಮಿಸಿ ಮತ ಚಲಾಯಿಸಿದರು. ರಾಘವೇಂದ್ರ ರಾಜ್‍ಕುಮಾರ್ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರೆ, ಲೂಸ್‍ಮಾದ ಯೋಗಿ, ಸುಧಾರಾಣಿ, ಬಿಗ್‍ಬಾಸ್ ಖ್ಯಾತಿಯ ನಿವೇದಿತಾ ಗೌಡ, ಹರ್ಷಿಕಾ ಪೂಣಚ್ಚ ಸೇರಿದಂತೆ ಸಾಕಷ್ಟು ಕಲಾವಿದರು ವೋಟ್ ಮಾಡಿದರು.

raagu

Dc-7EWSU0AATgMS

Dc-tsQIV0AEsCAk

Sudeep--01

WhatsApp Image 2018-05-12 at 10.17.28 AM

 

Leelavati--01

 

Facebook Comments

Sri Raghav

Admin