111ರ ಇಳಿವಯಸ್ಸಿನಲ್ಲಿಯೂ ಮತದಾನ ಮಾಡಿ ಮಾದರಿಯಾದ ಸಿದ್ಧಗಂಗಾ ಶ್ರೀಗಳು

ಈ ಸುದ್ದಿಯನ್ನು ಶೇರ್ ಮಾಡಿ

Siddagaga

ತುಮಕೂರು. ಮೇ.12 : 111 ರ ಇಳಿವಯಸ್ಸಿನಲ್ಲಿಯೂ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮತದಾನ ಮಾಡಿ ಮಾದರಿ ಎನಿಸಿದರು. ಮಠದ ಆವರಣದಲ್ಲಿರುವ ಸಿದ್ದಲಿಂಗೇಶ್ವರ ಪಾಥಮಿಕ ಶಾಲೆಯ ಸಂಖ್ಯೆ 113 ರಲ್ಲಿ ಬೆಳಿಗ್ಗೆ ಮತದಾನ ಮಾಡಿದ ಅವರು ಎಂದಿನಂತೆ ಲವಲವಿಕೆಯಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಸಾರ್ವತ್ರಿಕ ಚುನಾವಣೆ ಪ್ರಾರಂಭವಾದಾಗಿನಿಂದ ಚಾಚು ತಪ್ಪದೆ ಶ್ರೀಗಳು ಮತದಾನ ಮಾಡುತ್ತಿದ್ದಾರೆ. ಮುಕ್ತ ಮತದಾನ ಮಾಡಿ ಉತ್ತಮ ಅಭ್ಯರ್ಥಿಗಳನ್ನ ಆಯ್ಕೆ ಮಾಡುವಂತೆ ಮತದಾರಿಗೆ ಶ್ರೀಗಳ ಕರೆ ನೀಡಿದರು. ಈ ಚುನಾವಣೆಯಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾದದ್ದು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತದಾನ ಮೌಲ್ಯ ಹೆಚ್ಚಿಸಲು ಶ್ರೀಗಳು ಕರೆ ನೀಡಿದರು. (ರಾಜ್ಯ  ವಿಧಾನಸಭಾ ಚುನಾವಣೆ : ಮತದಾನದ Live Updates )

Facebook Comments

Sri Raghav

Admin