ಬಸ್ ಪ್ರಯಾಣಿಕರ ಬ್ಯಾಗ್‍ಗಳಿಂದ ಹಣ ಎಗರಿಸುತ್ತಿದ್ದ ಏಳು ಮಂದಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Election--01

ಬೆಂಗಳೂರು, ಮೇ 13- ಬಸ್ ಪ್ರಯಾಣಿಕರ ಜೇಬು ಹಾಗೂ ಬ್ಯಾಗ್‍ಗಳಿಂದ ಚಿನ್ನಾಭರಣ ಕಳವು ಮಾಡುತ್ತಿದ್ದ ಹಾಗೂ ಸರ ಅಪಹರಣ, ರಾತ್ರಿ ಕನ್ನಗಳವು ಮಾಡುತ್ತಿದ್ದ ಆಂಧ್ರ ಮೂಲದ ಮೂವರು ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಉಪ್ಪಾರಪೇಟೆ ಠಾಣೆ ಪೋಲೀಸರು ಬಂಧಿಸಿದ್ದಾರೆ.  ಮೂಲತಃ ಮಂಡ್ಯದ ಮಂಜ, ಆಂಧ್ರ ಪ್ರದೇಶದ ನಾಗಮ್ಮ, ವೆಂಕಟೇಶ್, ಬಿಯಾರಾಮ್, ತಮಿಳುನಾಡಿನ ಮಂಜುಳಾ ಹಾಗೂ ತುಮಕೂರಿನ ರಾಕೇಶ ಮತ್ತು ಸಂತೋಷ ಬಂಧಿತ ಆರೋಪಿಗಳು.

ಆರೋಪಿಗಳ ಬಂಧನದಿಂದ 23 ಪ್ರಕರಣಗಳು ಪತ್ತೆಯಾಗಿದ್ದು, ಇವುಗಳಲ್ಲಿ 12 ಸರ ಅಪಹರಣ, ಎರಡು ರಾತ್ರಿ ಕನ್ನಗಳವು, ಎರಡು ಇತರೆ ಕಳವು, ವಿಜಯನಗರ ಠಾಣೆಯ ಎರಡು ಸರ ಅಪಹರಣ ಪ್ರಕರಣ, ಕಾಮಾಕ್ಷಿಪಾಳ್ಯ ಎರಡು ಸರ ಅಪಹರಣ, ಅನ್ನಪೂರ್ಣೇಶ್ವರಿನಗರ ಎರಡು ಸರ ಅಪಹರಣ, ಕೆಂಗೇರಿ ಠಾಣೆಯ ಎರಡು, ಜ್ಞಾನಭಾರತಿ ಠಾಣೆಯ ಒಂದು, ಬಸವೇಶ್ವರನಗರದ ಒಂದು, ಸಂಜಯನಗರ ಠಾಣೆಯ ಒಂದು, ಬ್ಯಾಟರಾಯನಪುರ ಠಾಣೆಯ ಎರಡು ಸರಗಳವು ಪ್ರಕರಣಗಳು ಪತ್ತೆಯಾದಂತಾಗಿವೆ.

ಅಲ್ಲದೆ, ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರಾತ್ರಿ ಕನ್ನಗಳವು ಪ್ರಕರಣ, ಕಲಾಸಿಪಾಳ್ಯ ವ್ಯಾಪ್ತಿಯ ನಾಲ್ಕು ಹಾಗೂ ಉಪ್ಪಾರಪೇಟೆ ಠಾಣೆಯ ಐದು ಇತರ ಕಳವು ಪ್ರಕರಣಗಳು ಪತ್ತೆಯಾಗಿವೆ.  ಆರೋಪಿಗಳಿಂದ 1 ಕೆಜಿ 17 ಗ್ರಾಂ ತೂಕದ ಚಿನ್ನಾಭರಣ, 1 ಕೆಜಿ 250 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.  ಈ ಆರೋಪಿಗಳು ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿ ಮಹಿಳೆಯರ ಬ್ಯಾಗ್ ಹಾಗೂ ಪುರುಷರ ಪ್ಯಾಂಟ್ ಜೇಬಿನಿಂದ ಹಣ ಕಳ್ಳತನ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.

Facebook Comments

Sri Raghav

Admin