ಬ್ರೇಕಿಂಗ್ : ನಟಿ ತಾರಾ ಅನುರಾಧ ಜಯನಗರದ ಬಿಜೆಪಿ ಅಭ್ಯರ್ಥಿ..?

ಈ ಸುದ್ದಿಯನ್ನು ಶೇರ್ ಮಾಡಿ

Tara--01

ಶಾಸಕ ವಿಜಯಕುಮಾರ್ ಅಕಾಲಿಕ ನಿಧನದಿಂದ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಭಾರಿ ವಿಷಯ ಚರ್ಚೆಯಲ್ಲಿರುವಾಗಲೇ, ಬಿಜೆಪಿಯಲ್ಲಿ ಸಕ್ರೀಯವಾಗಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಹೆಸರು ಕೇಳಿ ಬಂದಿದೆ. ಈ ಮಧ್ಯೆ ಈ ಕ್ಷೇತ್ರಕ್ಕೆ ಅನೇಕರ ಹೆಸರುಗಳು ಕೇಳಿಬಂದಿದ್ದವು. ಈಗ ಹೊಸದಾಗಿ ತಾರಾ ಅವರನ್ನು ಬಿಜೆಪಿ ಈ ಕ್ಷೇತ್ರದಲ್ಲಿ ಕಣಕ್ಕಿಳಿಸಲಿದೆ ಎನ್ನಲಾಗುತ್ತಿದೆ. ಆದರೆ ಬಿಜೆಪಿಯಿಂದ ಯಾರು ಅಭ್ಯರ್ಥಿಯಾಗಬೇಕು ಎಂಬ ಪ್ರಶ್ನೆಗೆ ಈವರೆಗೂ ಬಿಜೆಪಿ ನಿರ್ಧಾರ ಕೈಗೊಂಡಿಲ್ಲ.

ಹಲವು ದಿನಗಳಿಂದ ಚಿತ್ರ ರಂಗದ ಜೊತೆ ರಾಜಕೀಯದಲ್ಲೂ ಸಕ್ರಿಯವಾಗಿರುವ ನಟಿ ತಾರಾ ಅನುರಾಧ ಈ ಕ್ಷೇತ್ರದಲ್ಲಿ ಚುನಾವಣೆಗೆ ನಿಂತರೆ ಬಿಜೆಪಿಗೆ ಲಾಭವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಅಷ್ಟಕ್ಕೂ ತಾರಾ ಅವರು ಇಷ್ಟು ದಿನ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡು ಹಲವು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಮಾಡಿದ್ದರು.

ಸಿನಿ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಾ ಉತ್ತಮ ನಟಿ ಎಂದು ಗುರುತಿಸಿಕೊಂಡ ನಟಿ ತಾರಾ ಹಲವಾರು ವಿಭಿನ್ನ ಬಗೆಯ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ತದನಂತರ ರಾಜಕೀಯವನ್ನು ಪ್ರವೇಶ ಮಾಡಿದ ನಟಿ ತಾರಾ ಅನುರಾಧಾ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಸಕ್ರಿಯವಾಗಿ ರಾಜಕೀಯದಲ್ಲಿ ಸೇವೆ ಸಲ್ಲಿಸುತ್ತಿದ್ದ ತಾರಾ ಅವರು ವಿಧಾನಪರಿಷತ್ ಸದಸ್ಯರಾಗಿ ಕೂಡ ಜವಾಬ್ದಾರಿಯುತ ಸ್ಥಾನದಲ್ಲಿ ಗಮನ ಸೆಳೆದಿದ್ದಾರೆ.ಇದನ್ನು ಗಮನಿಸಿರುವ ಪಕ್ಷದ ಮುಖಂಡರು ತಾರಾ ಅವರಿಗೆ ಜಯನಗರದ ಟಿಕೆ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಿಜವಾಗಿಯೂ ತಾರಾ ಅವರು ಜಯನಗರ ಕ್ಷೇತ್ರದ ಸ್ಪರ್ಧಿನಾ… ಇಲ್ಲವಾ… ಎಂಬುದನ್ನು ಕಾದು ನೋಡಬೇಕು. ಈ ನಡುವೆ ಸಂಸದ, ಕೇಂದ್ರ ಸಚಿವ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಹೆಸರೂ ಕೂಡ ಕೇಳಿ ಬಂದಿತ್ತು. ಇದೇ 28 ಆರ್ ಆರ್ ನಗರ ಕ್ಷೇತ್ರದ ಚುನಾವಣೆ ನಡೆಯಲಿದ್ದು ಅದೇ ದಿನಾಂಕದಂದು ಜಯನಗರದ ಚುನಾವಣಾ ನಿಗದಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Facebook Comments

Sri Raghav

Admin