ಭಾರತೀಯ ಸೇನಾ ಬತ್ತಳಿಕೆ ಸೇರಲಿದೆ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ

ಈ ಸುದ್ದಿಯನ್ನು ಶೇರ್ ಮಾಡಿ

Agni-5
ನವದೆಹಲಿ, ಮೇ 13- ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಗೆ 20 ವರ್ಷ ತುಂಬಿದ ಸಮಯದಲ್ಲೇ ಮಹತ್ವಾಕಾಂಕ್ಷಿ ಕ್ಷಿಪಣಿಯೊಂದು ಭಾರತ ಸೇನೆಯ ಭತ್ತಳಿಕೆಗೆ ಸೇರ್ಪಡೆಯಾಗಲಿದೆ. ಭಾರತೀಯ ಸೇನೆಯ ಸಾಮಥ್ರ್ಯ ಹೆಚ್ಚಿಸುವ ಸಲುವಾಗಿ ಶೀಘ್ರ ಅಗ್ನಿ 5 ಖಂಡಾತರ ಕ್ಷಿಪಣಿ ಸೇನೆಗೆ ಸೇರಲಿದೆ. ರಕ್ಷಣಾ ಮೂಲಗಳ ಪ್ರಕಾರ ಈಗಾಗಲೇ ಅಗ್ನಿ-5 ಕ್ಷಿಪಣಿಯ ಎಲ್ಲ ಪರೀಕ್ಷಾರ್ಥ ಉಡಾವಣೆಗಳು ಯಶಸ್ವಿಯಾಗಿದ್ದು, ಕ್ಷಿಪಣಿ ನಿರೀಕ್ಷೆಗೂ ಮೀರಿ ಸಫಲತೆ ಕಂಡಿದೆ. ಕಳೆದ ಜನವರಿಯಲ್ಲಿ ನಡೆಸಲಾದ ಪ್ರಾಯೋಗಿಕ ಪರೀಕ್ಷೆ ಯಶಸ್ವಿ ಯಾಗಿದ್ದು, ಕೊನೆಯ ಹಂತದ ಪ್ರಯೋಗ ತಿಂಗಳಾಂತ್ಯದಲ್ಲಿ ನಡೆಯುವ ನಿರೀಕ್ಷೆ ಇದೆ.

ಕಳೆದ ಜನವರಿಯಲ್ಲಿ ನಡೆಸಿದ್ದ ಪರೀಕ್ಷೆ ಯಶಸ್ವಿಯಾಗಿತ್ತು. ಜಲಂತರ್ಗಾಮಿಯಿಂದ ಕ್ಷಿಪಣಿ ಹಾರಿಸುವಲ್ಲಿ ಕೆಲ ತಾಂತ್ರಿಕ ದೋಷಗಳು ಎದುರಾಗಿದ್ದು, ಮುಂದಿನ ಪರೀಕ್ಷೆಯಲ್ಲಿ ಇದು ಇತ್ಯರ್ಥವಾದರೆ ಅಗ್ನಿ-5 ಸೇನೆಗೆ ದೊರಕಲಿದೆ. ಈ ಹಿನ್ನಲೆಯಲ್ಲಿ ಅಗ್ನಿ-5 ಕ್ಷಿಪಣಿಯನ್ನು ಭಾರತೀಯ ಸೇನೆಗೆ ಸೇರ್ಪಡೆ ಮಾಡಲು ಬಹುತೇಕ ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ ಈಗಾಗಲೇ ಭಾರತೀಯ ಸೇನೆ ಮತ್ತು ಡಿಆರ್ ಡಿಒ ಸಂಸ್ಥೆ ಈ ಸಂಬಂಧ ಪ್ರಾಥಮಿಕ ಕಾರ್ಯ ಪೂರ್ಣಗೊಂಡಿದೆ.

ಮಾಸಾಂತ್ಯದಲ್ಲಿ ನಡೆಯುವ ಪರೀಕ್ಷೆಯಲ್ಲಿ ಕ್ಷಿಪಣಿ ಯಶಸ್ವಿಯಾಗಿದ್ದೇ ಆದರೆ ಕ್ಷಿಪಣಿಯ ಸೇನಾ ನಿಯೋಜನೆ ದೃಢವಾಗುತ್ತದೆ, ಆಗ ಭಾರತ ಕೂಡ 5 ಸಾವಿರ ಕಿ.ಮೀ. ಗುರಿ ತಲುಪುವ ಅಣ್ವಸ್ತ್ರ ಕ್ಷಿಪಣಿ ಹೊಂದಿದ ವಿಶ್ವದ ಬೆರಳೆಣಿಕೆ ರಾಷ್ಟ್ರಗಳ ಪಟ್ಟಿಗೆ ಸೇರಲಿದೆ. 5,500 ರಿಂದ 5,800 ಕಿ.ಮೀ. ಗುರಿ ತಲುಪುವ ಸಾಮಥ್ರ್ಯವನ್ನು ಅಗ್ನಿ 5 ಕ್ಷಿಪಣಿ ಹೊಂದಿದ್ದು, ಸುಮಾರು 1500 ಕೆ.ಜಿ. ತೂಕದ ಅಣ್ವಸ್ತ್ರ ಹೊತ್ತೊಯ್ಯಬಲ್ಲ ಶಕ್ತಿ ಈ ಕ್ಷಿಪಣಿಗಿದೆ.

Facebook Comments

Sri Raghav

Admin