ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಳೇ ಯೋಜನೆಗಳ ಮುಂದುವರಿಕೆ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Parameshwar

ತುಮಕೂರು,ಮೇ13- ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ನಮ್ಮ ಹಳೇ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಲು ಅನುಕೂವಾಗುತ್ತದೆ ಎಂದು ಡಾ.ಜಿ ಪರಮೇಶ್ವರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತದೆ. 223 ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದ್ದೇವೆ. ಒಂದು ಕ್ಷೇತ್ರದಲ್ಲಿ ರೈತ ಸಂಘಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇವೆ. ಜನರು ನಮಗೆ ಸ್ಪಂದಿಸಿದ್ದಾರೆ. ಹೀಗಾಗಿ ಕೃತಜ್ಞತೆ ಹೇಳುತ್ತೇನೆ ಎಂದರು.

ಐದು ವರ್ಷದಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದೇವೆ. ಈ ಕೆಲಸ ಪೂರ್ಣಗೊಳ್ಳಬೇಕೆಂದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಕಾಂಗ್ರೆಸ್ ದೃಷ್ಟಿಯಿಂದ ಹಾಗೂ ಬೆಂಬಲಿಗರ ದೃಷ್ಡಿಯಿಂದ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳಂತಹ ಜನಪ್ರಿಯ ಯೋಜನೆಗಳು ಮುಂದುವರೆಯ ಬೇಕು. ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಪ್ರತಿಯೊಂದು ಮಾಧ್ಯಮದ ಸರ್ವೆಗಳು ನಮ್ಮನ್ನು ಎರಡನೇ ಸ್ಥಾನಕ್ಕೆ ನೀಡಿಲ್ಲ, ಕೆಲವು ಮೊದಲ ಸ್ಥಾನದಲ್ಲಿ ನಿಲ್ಲಿಸಿವೆ. ಆದರೂ ನಾವು ಸರ್ವೇಗಳನ್ನು ನಂಬುವುದಿಲ್ಲ. ಜನರ ಮೇಲೆ ವಿಸ್ವಾಸವಿದೆ ಅದೇ ನಮ್ಮ ನಂಬಿಕೆ ಎಂದರು. ರಾಹುಲ್ ಗಾಂಧಿ ನಾಲ್ಕು ಹಂತದಲ್ಲಿ ಪ್ರವಾಸ ಮಾಡಿ ನಾವು ಏನು ಮಾಡಿದ್ದೇವೆ, ಏನು ಮಾಡುತ್ತೇವೆ ಎಂದು ಸಮರ್ಥವಾಗಿ ಹೇಳಿದರು. ಅಮಿತ್ ಷಾ ಅವರು ಯಾವುದೇ ಸಾಕ್ಷ್ಯವಿಲ್ಲದೆ ಆಪಾದನೆ ಮಾಡಿದರು. ಪ್ರಧಾನಿ ಕೂಡ ಸಿಎಂ ಸಿದ್ದರಾಮಯ್ಯ ಬಗ್ಗೆ ವೈಯಕ್ತಿಯವಾಗಿ ಟೀಕೆ ಮಾಡಿದರು. ಸರ್ಕಾರದ ಭ್ರಷ್ಟಚಾರದ ಬಗ್ಗೆ ಮಾತನಾಡಬೇಕಾದರೆ ಪುರಾವೆಗಳಿದ್ದರೆ ನೀಡಿ ಎಂದು ಹೇಳಿದ್ದೆವು. 10 ಪರ್ಸೇಂಟ್ ಸರ್ಕಾರ ಎಂದು ಹೇಳಿದರು. ಯಾವುದರ ಬಗ್ಗೆಯೂ ದಾಖಲೆ ನೀಡಿಲ್ಲ ಎಂದು ತಿರುಗೇಟು ನೀಡಿದರು.

ನಾವು ವೈಯಕ್ತಿಕವಾಗಿ ಯಾರ ಮೇಲೂ ದಾಳಿ ಮಾಡಲಿಲ್ಲ, ಹೊಸದಾಗಿ ಚುನಾವಣೆ ಎದುರಿಸಿದ್ದೇವೆ. ಮುಖ್ಯಮಂತ್ರಿ ಸ್ಥಾನ ಈಗ ಅಪ್ರಸ್ತುತ. ಮೇಜÁರಿಟಿ ಬಂದ ಮೇಲೆ ಸಿಎಲ್ಪಿ ಸಭೆ ಕರೆದು ಸಿಎಂ ಅಭ್ಯರ್ಥಿಯನ್ನು ನಿರ್ಧಾರ ಮಾಡುತ್ತೇವೆ. ಸಿದ್ದರಾಮಯ್ಯ ಸಿಎಂ ಆದರೆ ನನ್ನದೇನು ತಕರಾರಿಲ್ಲ. ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವುದಿಲ್ಲ,ಹೀಗಾಗಿ ಯಾರೊಂದಿಗೂ ಮೈತ್ರಿ ಪ್ರಶ್ನೆ ಅಪ್ರಸ್ತುತ ಎಂದು ಸ್ಪಷ್ಟಪಡಿಸಿದರು.

Facebook Comments

Sri Raghav

Admin