ಮಲಗಿದ್ದವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Murder--01
ಗೌರಿಬಿದನೂರು, ಮೇ 13-ರಾತ್ರಿ ಮನೆಯ ಮುಂದಿನ ಜಗಲಿ ಮೇಲೆ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹತ್ಯೆಗೈದಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಣಿವಾಲ ಗ್ರಾಮದ ವೆಂಕಟೇಶಪ್ಪ (45) ಹತ್ಯೆಯಾದ ವ್ಯಕ್ತಿ. ಈತ ನಿನ್ನೆ ರಾತ್ರಿ ತನ್ನ ಮನೆಯ ಮುಂದಿನ ಜಗಲಿ ಮೇಲೆ ಮಲಗಿದ್ದರು. ಬೆಳಗ್ಗೆ ಸುಮಾರು 5.45ರ ಸಮಯದಲ್ಲಿ ಮನೆಯವರು ಎದ್ದು ಹೊರಬರುವಷ್ಟರಲ್ಲಿ ವೆಂಕಟೇಶಪ್ಪನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

ಯಾವುದೇ ರಾಜಕೀಯ ಬಣದಲ್ಲೂ ಗುರುತಿಸಿಕೊಳ್ಳದ ವೆಂಕಟೇಶಪ್ಪನ ಕೊಲೆಗೆ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ಶ್ವಾನದಳ ಕರೆಸಿ ತಪಾಸಣೆ ನಡೆಸಲಾಗಿದ್ದು, ಎಸ್‍ಪಿ ಕಾರ್ತಿಕ್‍ರೆಡ್ಡಿ, ಡಿವೈಎಸ್‍ಪಿ ಪ್ರಭುಶಂಕರ್, ಸಬ್‍ಇನ್ಸ್‍ಪೆಕ್ಟರ್ ರವಿಕುಮಾರ್, ವೃತ್ತನಿರೀಕ್ಷಕ ಅಮರನಾರಾಯಣ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಮ್ಮ ತಂದೆಗೆ ಯಾರೂ ಶತ್ರುಗಳಿರಲಿಲ್ಲ ಎಂದು ಅವರ ಮಕ್ಕಳು ತಿಳಿಸಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin