ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಯಾವತ್ತಿನವರೆಗೂ ಈ ದೇಹವೆಂಬ  ಮನೆಯು ಚೆನ್ನಾಗಿದೆಯೋ, ಎಲ್ಲಿಯವರೆಗೂ ಮುಪ್ಪು ದೂರವಾಗಿದೆಯೋ, ಎಲ್ಲಿಯ ವರೆಗೂ ಇಂದ್ರಿಯಗಳ ಶಕ್ತಿ ಕುಗ್ಗಿಲ್ಲವೋ ಮತ್ತು ಆಯುಸ್ಸಿನ ಕ್ಷೀಣದೆಶೆಯುಲ್ಲಂಟಾಗಿಲ್ಲವೋ ಆಗಲೇ ವಿದ್ವಾಂಸನಿಂದ ಆತ್ಮ ಶ್ರೇಯಸ್ಸಿಗೋಸ್ಕರ ಮಹಾ ಪ್ರಯತ್ನವು ಮಾಡಲ್ಪಡಬೇಕು. ಹಾಗಲ್ಲದೆ ಮನೆಗೆ ಬೆಂಕಿ ಬಿದ್ದು ಉರಿಯುತ್ತಿರುವಾಗ ಭಾವಿಯನ್ನಗೆಯುವ ಉದ್ಯೋಗವು ಯಾವ ರೀತಿಯದು..? -ವೈರಾಗ್ಯಶತಕ

Rashi

ಪಂಚಾಂಗ : ಮಂಗಳವಾರ, 15.05.2018

ಸೂರ್ಯ ಉದಯ ಬೆ.05.55 / ಸೂರ್ಯ ಅಸ್ತ ಸಂ.06.38
ಚಂದ್ರ ಉದಯ ಬೆ.05.45 / ಚಂದ್ರ ಅಸ್ತ ಸಂ.06.36
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು
ವೈಶಾಖ ಮಾಸ / ಕೃಷ್ಣ ಪಕ್ಷ / ತಿಥಿ : ಅಮಾವಾಸ್ಯೆ (ಸಾ.05.18)
ನಕ್ಷತ್ರ: ಭರಣಿ (ಬೆ.10.56) / ಯೋಗ: ಸೌಭಾ-ಶೋಭ (ಬೆ.05.21-ರಾ.02.06)
ಕರಣ: ಚತುಷ್ಪಾದ-ನಾಗವಾನ್-ಕಿಂಸ್ತುಘ್ನ (ಬೆ.06.36-ಸಾ.07.18-ರಾ.03.55)
ಮಳೆ ನಕ್ಷತ್ರ: ಭರಣಿ / ಮಾಸ: ವೃಷಭ / ತೇದಿ: 01

ರಾಶಿ ಭವಿಷ್ಯ  :  

ಮೇಷ : ನೆರೆಯೊರೆಯವರು, ಸ್ನೇಹಿತರಿಂದ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ
ವೃಷಭ : ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾಳ್ಮೆಯಿಂದಿರುವುದು ಒಳಿತು
ಮಿಥುನ: ಕಲಾಕ್ಷೇತ್ರದಲ್ಲಿರುವವರಿಗೆ ಉತ್ತಮ ದಿನ
ಕಟಕ : ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ
ಸಿಂಹ: ನಿಮ್ಮ ನಡವಳಿಕೆ ಯಿಂದ ಇತರರಿಗೆ ತೊಂದರೆಯಾಗಬಹುದು
ಕನ್ಯಾ: ನಿಮ್ಮ ಬುದ್ಧಿ ಚಾತುರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ
ತುಲಾ: ಮಕ್ಕಳು ಮತ್ತು ಹೆಂಡತಿಯೊಂದಿಗೆ ಪ್ರವಾಸ ಹೋಗುವ ಸೂಚನೆಗಳಿವೆ
ವೃಶ್ಚಿಕ: ಬಂಧುಗಳೊಂದಿಗೆ ಸುಮಧುರ ಬಾಂಧವ್ಯ ಹೊಂದಿರುತ್ತೀರಿ
ಧನುಸ್ಸು: ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಲಾಭ ಸಿಗುತ್ತದೆ, ಕೌಟುಂಬಿಕ ಸೌಖ್ಯವಿರುತ್ತದೆ
ಮಕರ: ಎಲ್ಲ ಕೆಲಸದಲ್ಲೂ ಜಯ ದೊರೆಯುತ್ತದೆ
ಕುಂಭ: ಮಿತ್ರರಿಂದ ಸಹಾಯ ಪಡೆಯುವಿರಿ
ಮೀನ: ದೂರದ ಸಂಬಂಧಿಗಳ ಆಗಮನವಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin