ಲೋಕಪಾಲ್ ಆಯ್ಕೆ ಸಮಿತಿ ತೀರ್ಪುಗಾರರಾಗಿ ಮುಕುಲ್ ರೋಹಟಗಿ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Mukhul
ನವದೆಹಲಿ, ಮೇ 15-ಭಷ್ಟಾಚಾರ ನಿಗ್ರಹಕ್ಕಾಗಿ ಲೋಕಪಾಲರನ್ನು ನೇಮಕ ಮಾಡುವ ಸಮಿತಿಗೆ ಹೆಸರಾಂತ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಇಂದು ತಿಳಿಸಿದೆ. ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ನ್ಯಾಯಮೂರ್ತಿ ರಂಜನ್ ಗೊಗೈ ನೇತೃತ್ವದ ಪೀಠಕ್ಕೆ ತಿಳಿಸಿದರು. ಪ್ರಧಾನಮಂತ್ರಿ ಆಧ್ಯಕ್ಷರಾಗಿರುವ ಆಯ್ಕೆ ಸಮಿತಿಗೆ ತೀರ್ಪುಗಾರರನ್ನಾಗಿ ಮುಕುಲ್ ಅವರನ್ನು ನೇಮಕ ಮಾಡಲು ಮೇ 11ರಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Facebook Comments

Sri Raghav

Admin