ಅನುಮಾನಕ್ಕೆಡೆಮಾಡಿಕೊಟ್ಟ ಕಾಂಗ್ರೆಸ್ ನ 11 ಮಂದಿ ಶಾಸಕರ ನಡೆ..!

ಈ ಸುದ್ದಿಯನ್ನು ಶೇರ್ ಮಾಡಿ

Nagendra Anand Singh

ಬೆಂಗಳೂರು, ಮೇ 16-ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದ ಬಿ.ನಾಗೇಂದ್ರ, ಆನಂದ್‍ಸಿಂಗ್ ಸೇರಿದಂತೆ 11 ಮಂದಿ ಶಾಸಕರು ಮಧ್ಯಾಹ್ನದವರೆಗೂ ಶಾಸಕಾಂಗ ಸಭೆಗೆ ಹಾಜರಾಗದೆ ಗೊಂದಲದ ವಾತಾವರಣ ಮೂಡುವಂತೆ ಮಾಡಿದ್ದರು. ಬಳ್ಳಾರಿಯ ಬಿ.ನಾಗೇಂದ್ರ, ಆನಂದ್‍ಸಿಂಗ್.ಜೆ.ಎನ್.ಗಣೇಶ್, ಭೀಮಾನಾಯ್ಕ್, ಬೆಳಗಾವಿಯ ಗಣೇಶ್ ಹುಕ್ಕೇರಿ, ಸತೀಶ್ ಜಾರಕಿ ಹೊಳಿ, ರಮೇಶ್ ಜಾರಕಿ ಹೊಳಿ, ಬೆಂಗಳೂರಿನ ಜಮೀರ್ ಅಹಮ್ಮದ್ ಖಾನ್,ಅಖಂಡ ಶ್ರೀನಿವಾಸಮೂರ್ತಿ ಸೇರಿದಂತೆ ಸುಮಾರು 11 ಮಂದಿ ಶಾಸಕಾಂಗ ಸಭೆಯಲ್ಲಿ ಭಾಗವಹಿಸಲಿಲ್ಲ. ಅದರಲ್ಲಿ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿ ಹೊಳಿ ಸಿದ್ದರಾಮಯ್ಯ ಅವರ ಮಾತನ್ನು ಮೀರುವುದಿಲ್ಲ. ನಾವು ಕಾಂಗ್ರಸ್ ಜೊತೆಗಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಗಣೇಶ್ ಹುಕ್ಕೇರಿ ಅವರು ತಂದೆ ಪ್ರಕಾಶ್ ಹುಕ್ಕೇರಿ ಜೊತೆಯಲ್ಲಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಆಮಿಷಕ್ಕೆ ಬಲಿಯಾಗುವುದಿಲ್ಲ. ಪಕ್ಷದ ತೀರ್ಮಾನಕ್ಕೆ ಬದ್ದರಾಗಿರುತ್ತಾರೆ ಎಂಬ ಸಂದೇಶ ರವಾನಿಸಿದ್ದಾರೆ. ಇನ್ನು ಜಮೀರ್ ಅಹಮ್ಮದ್ ಖಾನ್, ಅಖಂಡ ಶ್ರೀನಿವಾಸ್ ಮೂರ್ತಿ ಬೆಂಗಳೂರಿನಲ್ಲೇ ಇದ್ದು ಸಭೆಗೆ ಭಾಘವಹಿಸದೆ ಇರುವುದೇ ಹಲವಾರು ಅನುಮಾನಗಳಿಗೆ ಕಾರಣವಾಗಿತ್ತು.

ಇವರಿಬ್ಬರು ಜೆಡಿಎಸ್‍ನಲ್ಲಿ ಬಂಡಾಯವೆದ್ದು ಕಾಂಗ್ರೆಸ್ ಸೇರಿ ಶಾಸಕರಾಗಿರುವವರು. ಈಗ ಕಾಂಗ್ರೆಸ್ ಮತ್ತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಾದರೆ ನಮ್ಮನ್ನು ಮೂಲೆಗುಂಪು ಮಾಡಬಹುದೆಂಬ ಆತಂಕದಿಂದ ಶಾಸಕಾಂಗ ಸಭೆಯಲ್ಲಿ ಭಾಗವಹಿಸದೆ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಪಕ್ಷದ ಯಾವುದೇ ಶಾಸಕರಿಗೂ ಮೈತ್ರಿಯಿಂದ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿ ಅವರನ್ನು ಸಮಾಧಾನಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Facebook Comments

Sri Raghav

Admin