ಅಮರನಾಥ ಯಾತ್ರೆಗೆ 1.70 ಲಕ್ಷ ಭಕ್ತರ ನೋಂದಣಿ

ಈ ಸುದ್ದಿಯನ್ನು ಶೇರ್ ಮಾಡಿ

Amaranath-Yatra-01
ಜಮ್ಮು, ಮೇ 16-ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ವಿಶ್ವವಿಖ್ಯಾತ ಅಮರನಾಥ ಗುಹಾಂತರ ದೇವಾಲಯಕ್ಕೆ ಪವಿತ್ರ ಯಾತ್ರೆ ಕೈಗೊಳ್ಳಲು ಈವರೆಗೆ ಸುಮಾರು 1.70 ಲಕ್ಷ ಯಾತ್ರಾರ್ಥಿಗಳು ಹೆಸರುಗಳನ್ನು ನೋಂದಾಯಿಸಿದ್ದಾರೆ. ಜೂನ್ 28ರಂದು ಜಮ್ಮುವಿನಿಂದ 60 ದಿನಗಳ ಸುದೀರ್ಘ ಅಮರನಾಥ ಯಾತ್ರೆ ಆರಂಭವಾಗಲಿದೆ.

ದೇಶಾದ್ಯಂತ ವಿವಿಧ ಕೌಂಟರ್‍ಗಳಲ್ಲಿ 1.69 ಲಕ್ಷ ಯಾತ್ರಿಕರು ತಮ್ಮ ಹೆಸರುಗಳನ್ನು ನೋಂದಣಿ ಮಾಡಿದ್ದಾರೆ. 2,122 ವಿದೇಶ ಪ್ರವಾಸಿಗರಲ್ಲದೇ, 28,516 ಯಾತ್ರಿಗಳು ಹೆಲಿಕಾಪ್ಟರ್ ಮೂಲಕ ಪಯಣ ಕೈಗೊಳ್ಳಲು ತಮ್ಮ ಸ್ಥಾನಗಳನ್ನು ಕಾದಿರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 1ರಿಂದ ನೋಂದಣಿ ಆರಂಭವಾಗಿದ್ದು, ದೇಶಾದ್ಯಂತ ಭರದಿಂದ ನೋಂದಣಿ ಕಾರ್ಯಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಜೂನ್ 28ರಂದು ಆರಂಭವಾಗುವ ಅಮರನಾಥ ಯಾತ್ರೆ ಆಗಸ್ಟ್ 26ರ ರಕ್ಷಾಬಂಧನ್ ದಿನದಂದು ಮುಕ್ತಾಯವಾಗಲಿದೆ.

Facebook Comments

Sri Raghav

Admin