ಆಯುಕ್ತರ ಮಂಡಳಿಗೆ ಆಯ್ಕೆಯಾದ ಸುಶೀಲಾ ಜಯಪಾಲ

ಈ ಸುದ್ದಿಯನ್ನು ಶೇರ್ ಮಾಡಿ

susheela
ವಾಷಿಂಗ್ಟನ್, ಮೇ 16-ಭಾರತೀಯ ಮೂಲದ ಅಮೆರಿಕ ಸಂಸದೆ ಪ್ರಮೀಳಾ ಜಯಪಾಲ ಅವರ ಸಹೋದರಿ ಸುಶೀಲಾ ಜಯಪಾಲ, ಒರೆಗಾನ್ ನಗರದ ಮಲ್ಟಿನೊಮ್ಹಾ ಕೌಂಟಿಯ ಆಯುಕ್ತರ ಮಂಡಳಿಗೆ ಚುನಾಯಿತರಾಗಿದ್ದಾರೆ. ಅಮೆರಿಕದ ಪ್ರಶ್ಚಿಮ ರಾಜ್ಯಕ್ಕೆ ಆಯ್ಕೆಯಾದ ಪ್ರಥಮ ದಕ್ಷಿಣ ಏಷ್ಯಾದ ಪ್ರಜೆ ಎಂಬ ಹೆಗ್ಗಳಿಕೆಗೂ ಸುಶೀಲಾ ಪಾತ್ರರಾಗಿದ್ದಾರೆ.

ಕಾಂಗ್ರೆಸ್ ಸಂಸದೆಯ ಸಹೋದರಿ 55 ವರ್ಷದ ಸುಶೀಲಾ, ಶೇ.57ರಷ್ಟು ಮತಗಳೊಂದಿಗೆ ಮಲ್ಟಿನೊಮ್ಹಾ ಕೌಂಟಿಯ ಆಯುಕ್ತರ ಮಂಡಳಿಗೆ ಜಿಲ್ಲಾ-2 ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಬಗ್ಗೆ ನಿನ್ನೆ ರಾತ್ರಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಇದರೊಂದಿಗೆ ಅಮೆರಿಕದಲ್ಲಿ ಸಹೋದರಿಯರಿಬ್ಬರೂ ಉನ್ನತ ಹುದ್ದೆಯಲ್ಲಿ ಮಾನ್ಯತೆ ಪಡೆದಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಸುಶೀಲಾ ಜಯಪಾಲ, ನನ್ನ ಸಹೋದರಿ ಓರೆಗಾಂವ್‍ನ ಪ್ರತಿಷ್ಠಿತ ಮಂಡಳಿಗೆ ದಕ್ಷಿಣ ಏಷ್ಯಾ ಮೂಲದ ಪ್ರಥಮ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೆಟಿವ್(ಪ್ರತಿನಿಧಿಗಳ ಸದನ)ಗೆ ಚುನಾಯಿತರಾದ ಭಾರತೀಯ ಮೂಲದ ಪ್ರಥಮ ಅಮೆರಿಕ ಮಹಿಳೆ ಎಂಬ ಕೀರ್ತಿಗೆ ಪ್ರಮೀಳಾ ಈಗಾಗಲೇ ಪಾತ್ರವಾಗಿದ್ದಾರೆ.

Facebook Comments

Sri Raghav

Admin