ಕರ್ನಾಟಕ ಚುನಾವಣೆಯಲ್ಲಿ ‘ಅಮ್ ಆದ್ಮಿ’ ವಾಷ್ ಔಟ್, 29 ಅಭ್ಯರ್ಥಿಗಳ ಠೇವಣಿ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

AAP--01
ನವದೆಹಲಿ/ಬೆಂಗಳೂರು, ಮೇ 16- ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಾರ್ಟಿ(ಎಎಪಿ) ವಾಷ್ ಔಟ್ ಆಗಿದೆ. ಪೊ ರಕೆ ಗುರುತಿನ ಆಪ್ ಹೀನಾಯವಾಗಿ ಸೋತಿದ್ದೇ ಅಲ್ಲದೇ ಸ್ಪರ್ಧಿಸಿದ್ದ ಎಲ್ಲ 29 ಕ್ಷೇತ್ರಗಳಲ್ಲೂ ಠೇವಣಿ ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ನೀಡುವುದು ನಮ್ಮ ಉದ್ದೇಶವಾಗಿತ್ತು. ಆದರೆ ನಾವು ವಾಷ್ ಔಟ್ ಆಗಿದ್ದೇವೆ. ಕಾರಣ ಏನು ಎಂಬುದು ತಿಳಿದಿಲ್ಲ. ನಮಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು. ಆದರೆ ಅದು ಮತಗಳಾಗಿ ಪರಿವರ್ತಿತವಾಗಲಿಲ್ಲ ಎಂದು ಎಎಪಿ ಕರ್ನಾಟಕ ಸಂಚಾಲಕ ಪೃಥ್ವಿ ರೆಡ್ಡಿ ವಿಷಾದದಿಂದ ನುಡಿದಿದ್ದಾರೆ.

ಕಾಂಗ್ರೆಸ್‍ನ ಪ್ರಬಲ ಅಭ್ಯರ್ಥಿ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪೃಥ್ವಿ ರೆಡ್ಡಿ ಕೇವಲ 1,861 ಮತಗಳನ್ನು ಗಳಿಸಿ ಠೇವಣಿ ಕಳೆದುಕೊಂಡಿದ್ಧಾರೆ. ಸ್ಪರ್ಧಿಸಿದ್ದ ಎಲ್ಲ ಆಪ್ ಅಭ್ಯರ್ಥಿಗಳಲ್ಲಿ ರೆಡ್ಡಿ ಗಳಿಸಿದ ಮತವೇ ಅತ್ಯಧಿಕ ಡುವ ಆರು ಶಿಬಿರಗಳಿವೆ ಎಂದು ಫೈಸಲ್ ಮಾಹಿತಿ ನೀಡಿದ್ದಾನೆ.

Facebook Comments

Sri Raghav

Admin