ಕೆರೆಯಲ್ಲಿ ಮುಳುಗಿ ಇಬ್ಬರ ಮಕ್ಕಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆನೇಕಲ್, ಮೇ 16-ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ದುರ್ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಒರಿಸ್ಸಾ ಮೂಲದ ಗೌತಮ್ (12), ಹಿನ್ನಕ್ಕಿ ಗ್ರಾಮದ ಸುಜಿತ್ (12) ಮೃತ ದುರ್ದೈವಿಗಳು. ಹಿನ್ನಕ್ಕಿ ಗ್ರಾಮದ ಸಮೀಪವಿರುವ ಕೆರೆಯಲ್ಲಿ ಈ ಇಬ್ಬರು ಬಾಲಕರು ನಿನ್ನೆ ಸಂಜೆ ಈಗಲು ತೆರಳಿದ್ದಾರೆ.

ಮಕ್ಕಳು ಕಾಣದಿದ್ದ ಬಗ್ಗೆ ಇತ್ತ ಪೋಷಕರು ರಾತ್ರಿಯಿಡೀ ಹೋರಾಟ ನಡೆಸಿದರೂ ಈ ಬಾಲಕರ ಸುಳಿವು ಪತ್ತೆಯಾಗಿರಲಿಲ್ಲ.ಆದರೆ ಇಂದು ಬೆಳಗ್ಗೆ ಕೆರೆಯ ದಡದ ಬಳಿ ಬಾಲಕರ ಬಟ್ಟೆಗಳು ಪತ್ತೆಯಾಗಿದ್ದು, ತಕ್ಷಣ ಗ್ರಾಮಸ್ಥರ ನೆರವಿನಿಂದ ಹುಡುಕಾಟ ನಡೆಸಿದಾಗ ಇಬ್ಬರು ಬಾಲಕರ ಮೃತದೇಹಗಳು ಪತ್ತೆಯಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಹೆನ್ನಾಗರ ಪಂಚಾಯ್ತಿ ಅಧ್ಯಕ್ಷ ಕೇಶವರೆಡ್ಡಿ ಅವರು ಮೃತ ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದರು. ಸ್ಥಳಕ್ಕೆ ಸೂರ್ಯಸಿಟಿ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin