ದೋಣಿ ದುರಂತ 17 ಮಂದಿ ರಕ್ಷಣೆ 23 ಮಂದಿಗೆ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

boat-1
ಗೋದಾವರಿ, ಮೇ 16- ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಿನ್ನೆ ಸಂಭವಿಸಿದ ದೋಣಿ ದುರಂತದಲ್ಲಿ  ಈವರೆಗೆ 17 ಮಂದಿ ಪಾರಾಗಿದ್ದು, ನಾಪತ್ತೆ ಯಾಗಿರುವ 23 ಜನರಿಗಾಗಿ ಶೋಧ ಮುಂದುವರಿದಿದೆ. 40 ಪ್ರಯಾಣಿಕರಿದ್ದ ದೋಣಿ ನಿನ್ನೆ ಗೋದಾವರಿ ನದಿಯಲ್ಲಿ ಮುಳುಗಿತು. ದುರಂತದ ನಂತರ 10 ಮಂದಿ ಈಜಿ ದಡ ಸೇರಿದ್ದು, ಏಳು ಜನರನ್ನು ರಕ್ಷಿಸಲಾಗಿದೆ. ಕಣ್ಮರೆಯಾಗಿರುವ ಇತರ 23 ಜನರಿಗಾಗಿ ಶೋಧ ನಡೆಯುತ್ತಿದೆ ಎಂದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ, ರಾಜ್ಯ ವಿಪತ್ತು ನಿರ್ವಹಣಾ ದಳ ಹಾಗೂ ಪೂರ್ವ ನೌಕಾ ಕಮಾಂಡ್‍ನ ಸಿಬ್ಬಂದಿಗಳು ಜಂಟಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.  ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಎನ್. ಚಿನಾ ರಾಜಪ್ಪ ಅವರು ಪೂರ್ವ ಗೋದಾವರಿ ಜಿಲ್ಲೆಯ ಅಧಿಕಾರಿಗಳೊಂದಿಗೆ ದೂರವಾಣಿ ಮುಖೇನ ಮಾತನಾಡಿ ರಕ್ಷಣಾ ಕಾರ್ಯಾಚರಣೆ ಮಾಹಿತಿ ಪಡೆದರು.

Facebook Comments

Sri Raghav

Admin