ಪಶ್ಚಿಮ ಬಂಗಾಳದ ಪಂಚಾಯಿತಿ ಚುನಾವಣೆ : 568 ಬೂತ್‍ಗಳಲ್ಲಿ ಮರು ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

vote
ಕೋಲ್ಕತಾ, ಮೇ 16- ಪಂಚಾಯಿತಿ ಚುನಾವಣೆ ವೇಳೆ ವ್ಯಾಪಕ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ 568 ಮತಗಟ್ಟೆಗಳಲ್ಲಿ ಇಂದು ವ್ಯಾಪಕ ಬಂದೋ ಬಸ್ತ್ ನಡುವೆ ಮರು ಮತದಾನ ನಡೆಯಿತು.  ರಾಜ್ಯದ ಎಲ್ಲ 20 ಜಿಲ್ಲೆಗಳಲ್ಲಿನ 568 ಬೂತ್‍ಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ನಡೆದ ಮತದಾನ ಶಾಂತಿಯುತವಾಗಿತ್ತು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಹೂಗ್ಲಿ, ಪಶ್ಚಿಮ ಮಿಡ್ನಾಪುರ್, ಕೂಚ್‍ಬೆಹರ್, ಮುಶಿರಾಬಾದ್, ನಾಡಿಯಾ, ಉತ್ತರ 24 ಪರಗಣ ಜಿಲ್ಲೆ, ಮಲ್ಡಾ, ಉತ್ತರ ದಿನಾಜ್‍ಪುರ್ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳ ಮತಗಟ್ಟೆಗಳಲ್ಲಿ ಮರು ಮತದಾನದ ವೇಳೆ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು. ಮೊನ್ನೆ ನಡೆದ ಪಂಚಾಯಿತಿ ಚುನಾವಣೆ ವೇಳೆ ವ್ಯಾಪಕ ಘರ್ಷಣೆ ಮತ್ತು ಹಿಂಸಾಚಾರ ಭುಗಿಲೆದ್ದು, ಕನಿಷ್ಟ 12 ಮಂದಿ ಮೃತಪಟ್ಟು, 43 ಜನ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಯೋಗ 568 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆದೇಶಿಸಲಾಗಿತ್ತು.

Facebook Comments