ಪುತ್ರ ವ್ಯಾಮೋಹಕ್ಕೊಳಗಾಗಿ ಸೋಲನ್ನನುಭವಿಸಿದ ಜಯಚಂದ್ರ..!

ಈ ಸುದ್ದಿಯನ್ನು ಶೇರ್ ಮಾಡಿ

tb--jayac-handra
ತುಮಕೂರು, ಮೇ 16- ನಿರೀಕ್ಷೆಯಂತೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಪುತ್ರ ವ್ಯಾಮೋಹಕ್ಕೆ ಹೋಗಿ ತಮ್ಮ ರಾಜಕೀಯ ಜೀವನವನ್ನೆ ಬಲಿ ಕೊಟ್ಟಿದ್ದು ತಿವ್ರ ಚರ್ಚೆಗೆ ಗ್ರಾಸವಾಗಿದೆ. ಹೌದು. ಇದು ರಾಜಕೀಯ ಪಂಡಿತರು ಹಾಕಿದ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಪಕ್ಷದಲ್ಲಿ ಟಿಕೇಟು ಘೋಷಣೆ ಮಾಡಿದ ಮರುಕ್ಷಣವೇ ಜಯಚಂದ್ರ ಅವರು ಪುತ್ರ ವ್ಯಾಮೋಹ ತಮ್ಮ ರಾಜಕೀಯ ಜೀವನವನ್ನೇ ಬಲಿ ಕೊಟ್ಟರು ಎಂದು ವಿಶ್ಲೇಷಣೆ ಮಾಡಲಾಗಿತ್ತು.

ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ರಾಜಕಾರಣಿ ಹಾಗೂ ರಾಜ್ಯ,ರಾಷ್ಟ್ರಮಟ್ಟದಲ್ಲಿ ಉತ್ತಮ ಭಾಂದಾವ್ಯ ಹೊಂದಿರುವದು ಹಾಗೂ ಕಾಂಗ್ರೆಸ್ ಹೈಕಮಾಂಡ್ ನಡುವೆ ಪ್ರಬಲವಾದ ನಾಯಕತ್ವ ಗುಣಗಳನ್ನು ಹೊಂದಿದ್ದರು ಅಲ್ಲದೆ ಜಿಲ್ಲೆಯ ಹಿರಿಯ ರಾಜಕಾರಣಿ ಕಾನೂನು ಚತುರ ಅದರೆ ಏನೆ ಅದರು ಕುಟುಂಬದ ರಾಜಕಾರಣಕ್ಕೆ ತಲೆ ದೂಗಿ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡರು. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ತಮ್ಮ ಪುತ್ರ ಸಂತೋಷ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಲ್ಲಿ ಕಳೆದ 10 ವರ್ಷಗಳಿಂದ ಪಕ್ಷವನ್ನು ಸಂಘಟಿಸಿಕೊಂಡು ಬಂದಿದ್ದ ಸಾಸಲು ಸತೀಶ್ ಅವರಿಗೆ ಟಿಕೆಟ್ ನೀಡದೆ ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಸಾಸಲು ಸತೀಶ್ ಅವರ ಬೆಂಬಲಿಗರಲ್ಲಿ ತಿವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಜಯಚಂದ್ರ ಅವರಿಗೆ ಮುಜುಗರಕ್ಕೆ ಈಡಾದರು ನಂತರ ಶಿರಾ ತಾಲ್ಲೂಕಿನಲ್ಲಿ ಹಾಗೂ ಚಿಕ್ಕನಾಯ್ಕನಹಳ್ಳಿಯಲ್ಲಿ ಗೊಲ್ಲ ಸಮುದಾಯದವರು ತಿರುಗಿದ್ದರು ಕುರುಬ ಸಮುದಾಯದವರು ಜಯಚಂದ್ರ ಅವರ ವಿರುದ್ಧ ಕತ್ತಿ ಮಸೆದರು.  ಕಾರಣ ಚಿಕ್ಕನಾಯ್ಕನಹಳ್ಳಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸುರೇಶ್ ಬಾಬು ಅವರಿಗೆ ಪುತ್ರನನ್ನು ನಿಲ್ಲಿಸುವ ಮೂಲಕ ಅವರಿಗೆ ಹಿನ್ನಡೆ ಮಾಡಿದ್ದೀರಾ ಅಲ್ಲದೆ ಇಲ್ಲಿಯ ತನಕ ನಿಮ್ಮನ್ನು ಬೆಂಬಲಿಸಿದ್ದೀವಿ…ಈಗ ನಮ್ಮ ಬೆಂಬಲ ಇಲ್ಲ ಎಂದು ಬಹಿರಂಗ ವಾಗಿ ಬೇಸರ ವ್ಯಕ್ತಪಡಿಸಿದರು. ಈ ಎಲ್ಲಾ ಕಾರಣಗಳಿಂದ ಜಯಚಂದ್ರ ಅವರು ಪುತ್ರ ವ್ಯಾಮೋಹಕ್ಕೆ ಹೋಗಿ ತಮ್ಮ ರಾಜಕೀಯ ಜೀವನವನ್ನೆ ಬಲಿ ಕೊಟ್ಟು ಈಗ ನಿರಾಶರಾಗಿದ್ದಾರೆ.

Facebook Comments

Sri Raghav

Admin