ರಿಸಲ್ಟ್ ಬೆನ್ನೆಲ್ಲೇ ಚಿಗುರೊಡೆದ ಹಳೇದ್ವೇಷಗಳು, ಕೈ- ತೆನೆ ಕಾರ್ಯಕರ್ತರ ಮಾರಾಮಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ , ಮೇ 16- ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮುಗಿಯುತ್ತಿದ್ದಂತೆ ಇತ್ತ ಚಿಕ್ಕಬಳ್ಳಾಪುರದಲ್ಲಿ ಹಳೇದ್ವೇಷಗಳು ಚಿಗುರೊಡೆಯುವ ಮೂಲಕ ಜೆಡಿಎಸ್ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಕ್ರೌರ್ಯ ಮೆರೆದಿದ್ದಾರೆ . ಮತ ಎಣಿಕೆ ಮುಗಿಸಿ ತಮ್ಮ ತಮ್ಮ ಸ್ವಗ್ರಾಮಗಳತ್ತ ತೆರಳಿದ ಗ್ರಾಮಿಣ ಪ್ರದೇಶದ ಪಕ್ಷಗಳ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳ ಪೈಕಿ ಗೆಲುವಿನ ನಾಗಾಲೋಟ ಬೀಸಿದ ಅಭ್ಯರ್ಥಿಗಳ ಅಭಿಮಾನಿಗಳು ಸೋತವರ ಕಡೆ ಇದ್ದ ಮನೆಗಳ ಮುಂದೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡುವ ಮೂಲಕ ಅವರನ್ನು ಇನ್ನಷ್ಟು ಕೆರಳಿಸುವ ಮೂಲಕ ದ್ವಷಾಗ್ನೆಗಳನ್ನು ಬೆಳೆಸಿಕೊಂಡಿದ್ದಾರೆ.

chikka
ಆಗಿದ್ದೇನು: ಚಿಕ್ಕಬಳ್ಳಾಪುರ ತಾಲ್ಲೂಕು ಇನಮಿಂಚೇನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ||ಕೆ.ಸುಧಾಕರ್ ಅವರು ಗೆಲುವಾಗುತ್ತಿದ್ದಂತೆ ಗ್ರಾಮದಲ್ಲಿ ಪಟಾಕಿಗಳನ್ನು ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಜಯದುಂದುಬಿ ಆಚರಣೆ ಮಾಡಲು ಹೊರಟಿದ್ದಾರೆ ಪಟಾಕಿಗಳ ಸಿಡಿತಕ್ಕೆ ಗ್ರಾಮದಲ್ಲಿ ಪಶುಗಳು ಬೆದರಿ ಹೋಗುತ್ತಿರುವ ಬಗ್ಗೆ ವಿಜಯೋತ್ಸವ ಆಚರಣೆ ಮಾಡುತ್ತಿದ್ದ ಕಾರ್ಯಕರ್ತರಿಗೆ ಆಕ್ಷೇಪ ವ್ಯಕ್ತಪಡಿಸಿ ಪಟಾಕಿ ಸಿಡಿಸಬಾರದೆಂದು ತಾಕೀತುಮಾಡಿದ್ದಾರೆ ಆದರೂ ಪಟಾಕಿ ಸಿಡಿಸಿಕೊಂಡು ಘೋಷಣೆಗಳನ್ನು ಕೂಗಿದ್ದಾರೆ. ಈ ಮಧ್ಯೆ ಇಬ್ಬರ ನಡುವೆ ವಾಗ್ವಾದ ನಡೆದು ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿ ಹೊಡೆದಾಡುಕೊಳ್ಳುವ ಮಟ್ಟಿಗೆ ಬಂದಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಕೂಡಲೇ ಗ್ರಾಮಕ್ಕೆ ತೆರಳಿ ಈರ್ವರನ್ನು ಸಮಾದಾನ ಪಡಿಸಿ ಗುಂಪು ಘರ್ಷಣೆಯನ್ನು ಚದುರಿಸಿದ್ದಾರೆ.

Facebook Comments

Sri Raghav

Admin