ಸೋಲನ್ನನುಭವಿಸಿದ ಎಂಇಪಿ ಅಧ್ಯಕ್ಷೆ ನೌಹೀರ ಶೇಕ್ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Nouhira-shek--01

ಬೆಂಗಳೂರು, ಮೇ 16- ರಾಜ್ಯದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯನ್ನು ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ಸ್ವಾಗತಿಸಿದ್ದಾರೆ . ಕೋಮುವಾದಿ ಶಕ್ತಿಗಳ ವಿರುದ್ಧ ಜಾತ್ಯಾತೀತ ಸರ್ಕಾರ ರಚನೆ ವಿಷಯ ಸ್ವಾಗತಾರ್ಹ ಬೆಳವಣಿಗೆ. ರಾಜ್ಯಪಾಲರು ಜೆಡಿಎಸ್- ಕಾಂಗ್ರೆಸ್ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಎಂಇಪಿ ಪಕ್ಷಕ್ಕೆ ರಾಜ್ಯದ ಜನತೆ ಅಲ್ಪ ಪ್ರಮಾಣದಲ್ಲಿ ಬೆಂಬಲಿಸಿದ್ದಾರೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಜನರ ತೀರ್ಪಿಗೆ ನಾನು ತಲೆಬಾಗುತ್ತೇನೆ ಎಂದ ಅವರು, ಮಾನವೀಯತೆಗಾಗಿ ನ್ಯಾಯ ಧ್ಯೇಯದಡಿ ಪಕ್ಷ ಹೋರಾಟ ಮುಂದುವರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಕನ್ನಡಿಗರ ಹೃದಯ ಗೆಲ್ಲುವ ಪ್ರಯತ್ನ ಮುಂದುವರೆಯಲಿದೆ. ಕೇವಲ 4 ತಿಂಗಳ ಅವಧಿಯಲ್ಲಿ ಎಂಇಪಿ ರಾಜ್ಯದ ಜನರ ಮನೆ ಮನೆ ತಲುಪಿದೆ ಎಂಬ ಸಮಾಧಾನವಿದೆ. ಅಲ್ಪಕಾಲದ ಅವಧಿಯಲ್ಲಿ ಪಕ್ಷಕ್ಕೆ ಭದ್ರಬುನಾದಿ ಹಾಕಲು ಅವಕಾಶ ಮಾಡಿಕೊಟ್ಟ ಜನತೆಗೆ ನಾನು ಸದಾ ಚಿರಋಣಿ.

ಜಗತ್ತಿನಲ್ಲಿ ಬದಲಾವಣೆಯೊಂದೆ ಶಾಶ್ವತ ಎಂಬ ನಿಯಮದಲ್ಲಿ ನಮ್ಮ ಅಚಲ ನಂಬಿಕೆಗೆ, ಜನರು ಇಂದಲ್ಲ ನಾಳೆಯಾದರೂ ಬದಲಾವಣೆ ಬಯಸಿ ನಮಗೂ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ವರ್ಷ ಲೋಕಸಭಾ ಚುನಾವಣೆ ಬರಲಿದ್ದು, ಮತ್ತೊಮ್ಮೆ ಕನ್ನಡಿಗರ ಅದೃಷ್ಟ ಪರೀಕ್ಷೆಗೆ ಬರಲು ಕಾತುರಳಾಗಿದ್ದೇನೆ. ಏನೇ ಆಗಲಿ ಪಕ್ಷಕ್ಕೆ ರಾಜ್ಯದಲ್ಲಿ ಗಟ್ಟಿನೆಲೆ ಸಿಗಲಿದೆ ಎಂಬ ನಂಬಿಕೆ ಇದೆ. ಮಾಧ್ಯಮ ಮಿತ್ರರಿಗೆ, ಹಗಲಿರುಳು ಅವಿರತವಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಅಭಿನಂದನೆ ಹೇಳಬಯಸುತ್ತೇನೆ. ಈ ಪ್ರೀತಿ-ವಿಶ್ವಾಸ ಸದಾ ಹೀಗೆಯೇ ಮುಂದುವರಿಯಲಿ ಎಂದು ಆಶಿಸುವುದಾಗಿಯೂ ನೌಹೀರಾ ಶೇಕ್ ಹೇಳಿz್ದÁರೆ.

Facebook Comments

Sri Raghav

Admin