ಹ್ಯಾಟ್ರಿಕ್ ಗೆಲುವಿನ ತವಕದಲ್ಲಿರುವ ಆರ್‍ಸಿಬಿಗೆ ಹೈದರಾಬಾದ್ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Kohli--01

ಬೆಂಗಳೂರು, ಮೇ 16-ಪ್ಲೇಆಫ್ ಅವಕಾಶದ ಸಾಧ್ಯತೆಯನ್ನು ಜೀವಂತವಾಗಿಟ್ಟುಕೊಂಡಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‍ಸಿಬಿ) ನಾಳೆ ಐಪಿಎಲ್ ಟಿ-20 ಕ್ರಮಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಪ್ರಬಲ ಸನ್ ರೈಸರ್ಸ್ ಹೈದರಾಬಾದ್(ಎಸ್‍ಆರ್‍ಹೆಚ್) ತಂಡವನ್ನು ಎದುರಿಸಿದೆ. ಉದ್ಯಾನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಪಂದ್ಯವನ್ನು ಆರ್‍ಸಿಬಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಡೇರ್ ಡೆವಿಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸತತ ಎರಡು ಗೆಲುವುಗಳನ್ನು ದಾಖಲಿಸಿರುವ ಕೊಹ್ಲಿ ಪಡೆ ಹ್ಯಾಟ್ರಿಕ್ ಜಯಕ್ಕಾಗಿ ತವಕಿಸುತ್ತಿದೆ.

ಬಲಿಷ್ಠ ಎಸ್‍ಆರ್‍ಎಚ್ ತಂಡ ಒಟ್ಟು 12 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿ ಚುಟುಕು ಕ್ರಿಕೆಟ್ ಪಂದ್ಯಾವಳಿಯ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಸಮರ್ಥ ಆಟಗಾರರನ್ನು ಹೊಂದಿದ್ದರೂ ಈವರೆಗೆ ಆಡಿದ 12 ಪಂದ್ಯಗಳಲ್ಲಿ ಆರ್‍ಸಿಬಿ 5 ಪಂದ್ಯಗಳನ್ನು ಮಾತ್ರ. ಹೀಗಾಗಿ ನಾಳಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ತಂಡ ಸಿಲುಕಿದೆ. ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಸಿಡಿಲಬ್ಬರದ ಬ್ಯಾಟ್ಸ್‍ಮನ್ ಎ ಬಿ ಡಿ ವಿಲಿಯರ್ಸ್ ನಾಳಿನ ಪಂದ್ಯದ ತಾರಾ ಆಕರ್ಷಣೆಯಾಗಿದ್ದಾರೆ. 12 ಪಂದ್ಯಗಳಿಂದ ಕೊಹ್ಲಿ 514 ರನ್‍ಗಳನ್ನು ಪ್ರೇರಿಸಿದ್ದರೆ, ಎ ಬಿ ಡಿ 358 ರನ್‍ಗಳನ್ನು ಕಲೆ ಹಾಕಿದ್ದಾರೆ.

ಆರ್‍ಸಿಬಿ ಆಕ್ರಮಣಕಾರಿ ಬೌಲರ್ ಉಮೇಶ್ ಯಾದವ್ ನಾಳೆ ಹೈದರಾಬಾದ್ ವಿರುದ್ಧ ಪಂದ್ಯದಲ್ಲೂ ತಮ್ಮ ಕೈ ಚಳಕ ಪ್ರದರ್ಶಿಸುವ ಬಗ್ಗೆ ಕುತೂಹಲ ಕೆರಳಿಸಿದೆ. ಈವರೆಗೂ ಯಾದವ್ ಪಡೆದಿರುವ ವಿಕೆಟ್‍ಗಳ ಸಂಖ್ಯೆ 17. ಇನ್ನು ಹೈದರಾಬಾದ್ ತಂಡದಲ್ಲಿ ಆರಂಭಿಕ ಬ್ಯಾಟ್ಸ್‍ಮನ್ ಶಿಖರ್ ಧವನ್ ಮತ್ತು ನಾಯಕ ಕೇನ್ ವಿಲಿಯಮ್ ಸನ್ ತಂಡಕ್ಕೆ ಆಸರೆ. ಈ ತಂಡದಲ್ಲಿ ಯುಸೂಫ್ ಪಠಾಣ್ ಮತ್ತು ಮನೀಶ್ ಪಾಂಡೆ ಸಹ ಉತ್ತಮ ಬ್ಯಾಟಿಂಗ್ ಲಯ ಕಾಯ್ದುಕೊಂಡಿದ್ದಾರೆ. ವೇಗದ ಬೌಲರ್ ಭುವನೇಶ್ವರ್‍ಕುಮಾರ್ ಸೇರಿದಂತೆ ಸಿದ್ದಾರ್ಥ ಕೌಲ್,ಸಂದೀಪ್ ಶರ್ಮ,ರಶೀದ್ ಖಾನ್ ಮತ್ತು ಶಕೀಬ್ ಅಲ್ ಹಸನ್ ಹೈದರಾಬಾದ್‍ಗೆ ಆಸರೆ. ಒಟ್ಟಾರೆ ನಾಳೆ ನಡೆಯುವ ಹೈವೋಲ್ಟೇಜ್ ಪಂದ್ಯ ಕದನ ಕುತೂಹಲ ಕೆರಳಿಸಿದೆ.

Facebook Comments

Sri Raghav

Admin