ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಹೆಣ್ಣು ಹುಲಿ ತನ್ನ ಮರಿಗಳನ್ನು ಕಚ್ಚಿಕೊಂಡು ಒಯ್ಯುತ್ತದೆ. ಆದರೆ ಅವುಗಳನ್ನು ಹಲ್ಲುಗಳಿಂದ ಪೀಡಿಸುವುದಿಲ್ಲ. ಮರಿಗಳು ಕೆಳಗೆ ಬೀಳಬಾರದು, ಅವುಗಳಿಗೆ ಗಾಯವಾಗಲೂಬಾರದು ಎಂಬ ಹೆದರಿಕೆಯಿಂದ ಹೇಗೆ ಹಿಡಿದು ಕೊಂಡಿರುವುದೋ ಹಾಗೆ ಅಕ್ಷರಗಳನ್ನು ಉಚ್ಚರಿಸಬೇಕು(ಅಕ್ಷರಗಳನ್ನು ಸ್ಫುಟವಾಗಿ ಉಚ್ಚರಿಸಬೇಕು. ಕರ್ಕಶವಾಗಿ ಕೊರೆಯುವಂತೆ ಉಚ್ಚರಿಸಬಾರದು.  -ಪಾಣಿನೀಯಶಿಕ್ಷಾ

Rashi

ಪಂಚಾಂಗ : 17.05.2018 ಗುರುವಾರ

ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.38
ಚಂದ್ರ ಉದಯ ಬೆ.07.32 /ಚಂದ್ರ ಅಸ್ತ ಸಂ.08.40
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ಅಧಿಕ ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ : ದ್ವಿತೀಯಾ (ಬೆ.11.27)
ನಕ್ಷತ್ರ: ರೋಹಿ-ಮೃಗ (ಬೆ.06.48-ರಾ.04.33)
ಯೋಗ: ಸುಕರ್ಮ (ರಾ.07.03) / ಕರಣ: ಕೌಲವ-ತೈತಿಲ (ಬೆ.11.27-ರಾ.09.56)
ಮಳೆ ನಕ್ಷತ್ರ: ಕೃತ್ತಿಕಾ / ಮಾಸ: ವೃಷಭ / ತೇದಿ: 03

ರಾಶಿ ಭವಿಷ್ಯ  :  

ಮೇಷ : ಕಠಿಣ ಮಾತಿನಿಂದ ಜನರಲ್ಲಿ, ಕುಟುಂಬದಲ್ಲಿ ಮನಸ್ತಾಪವಾಗಬಹುದು
ವೃಷಭ : ಉದ್ಯೋಗಸ್ಥರಿಗೆ ಹಲವು ರೀತಿಯ ತೊಂದರೆ ಕಾಡುತ್ತವೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮಿಥುನ: ವಿದೇಶದಿಂದ ಉದ್ಯೋಗಕ್ಕೆ ಕರೆ ಬರಬಹುದು, ಮಾನಸಿಕ ನೆಮ್ಮದಿ ಇರುವುದಿಲ್ಲ
ಕಟಕ : ಸಂಗಾತಿಯೊಂದಿಗೆ ಕಲಹವಾಗುವ ಸಾಧ್ಯತೆ ಗಳಿವೆ, ಮಿತ್ರರೇ ಶತ್ರುಗಳಾಗುವರು
ಸಿಂಹ: ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗಬಹುದು
ಕನ್ಯಾ: ಶ್ರಮ ಹೆಚ್ಚು ಫಲ ಕಡಿಮೆ, ವ್ಯಾಪಾರದಲ್ಲಿ ನಷ್ಟ
ತುಲಾ: ದೈನಂದಿನ ಕೆಲಸ- ಕಾರ್ಯಗಳನ್ನು ಸರಾಗವಾಗಿ ಮಾಡಿ ಮುಗಿಸುವಿರಿ
ವೃಶ್ಚಿಕ: ಶುಭವಾರ್ತೆಯನ್ನು ಕೇಳುವಿರಿ, ಅನಿರೀಕ್ಷಿತವಾಗಿ ಆಸ್ತಿ ಬರುವ ಸಂಭವವಿದೆ
ಧನುಸ್ಸು: ಹಿತಶತ್ರುಗಳಿಂದ ಸಮಸ್ಯೆ ಎದುರಿಸಬೇಕಾಗುತ್ತದೆ
ಮಕರ: ಅಜೀರ್ಣ ವ್ಯಾಧಿ ಬಾಧಿಸುತ್ತದೆ
ಕುಂಭ: ಪ್ರೇಮಿಗಳಿಗೆ ಉತ್ತಮ ದಿನ
ಮೀನ: ವಿದ್ಯಾರ್ಥಿಗಳು ಓದಿನಲ್ಲಿ ಹಿನ್ನಡೆ ಸಾಧಿಸುವರು

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin