ಕಳೆಗಟ್ಟಿದ ಶಕ್ತಿಸೌಧಗಳು, ಎಲ್ಲೆಲ್ಲೂ ಮಿಂಚಿನ ಸಂಚಾರ

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha--01
ಬೆಂಗಳೂರು, ಮೇ 17- ವಿಧಾನಸಭೆಗೆ ಚುನಾವಣೆ ಘೋಷಣೆಯಾದ ನಂತರ ಜನಜಂಗುಳಿಯಿಲ್ಲದೆ ಬಿಕೋ ಎನ್ನುತ್ತಿದ್ದ ವಿಧಾನಸೌಧ-ವಿಕಾಸಸೌಧ ಇಂದು ಕಳೆಗಟ್ಟಿದೆ. ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ ವಿಧಾನಸೌಧಕ್ಕೆ ಆಗಮಿಸುತ್ತಿದ್ದಂತೆ ಎಲ್ಲೆಲ್ಲೂ ಮಿಂಚಿನ ಸಂಚಾರ ಕಂಡುಬಂದಿತು. ಅಧಿಕಾರಿಗಳು, ರಾಜಕಾರಣಿಗಳು, ಬಿಜೆಪಿ ಕಾರ್ಯಕರ್ತರು, ಮುಖಂಡರು ಬೆಳಗಿನಿಂದ ಆಗಮಿಸುತ್ತಲೇ ಇದ್ದು, ಈ ಎರಡೂ ಶಕ್ತಿಸೌಧಗಳಿಗೆ ಮತ್ತೆ ಹೊಸ ಕಳೆ ಬಂದಿದೆ.

ಇತ್ತ ಯಡಿಯೂರಪ್ಪ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದರೆ, ಅತ್ತ ವಿಧಾನಸೌಧ-ವಿಕಾಸಸೌಧಗಳ ನಡುವೆ ಇರುವ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜ್ಯಪಾಲರ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಎರಡೂ ಸೌಧಗಳ ಕಚೇರಿಗಳಲ್ಲಿ ಅಧಿಕಾರಿಗಳ ಚುರುಕಿನ ಓಡಾಟ ಕಂಡುಬಂದಿತು. ಇದುವರೆಗೆ ಬಿಕೋ ಎನ್ನುತ್ತಿದ್ದ ವಿಧಾನಸೌಧ ಇಂದು ಯಥಾಸ್ಥಿತಿಗೆ ಮರಳಿದೆ.

Facebook Comments

Sri Raghav

Admin