ತೆರೆಯ ಮೇಲೆ ಖದರ್ ತೋರಲು ಬಂದ ‘ಪಾರ್ಥಸಾರಥಿ’

ಈ ಸುದ್ದಿಯನ್ನು ಶೇರ್ ಮಾಡಿ

parthasarathi

ಸಿನಿಮಾ ಮೇಲಿನ ಪ್ರೀತಿ ಎಲ್ಲೇ ಇದ್ದರೂ ಕರೆತರುತ್ತದೆ ಎನ್ನುವುದಕ್ಕೆ ಇಲ್ಲೊಂದು ಪ್ರತ್ಯಕ್ಷ ನಿದರ್ಶನ ಸಿಕ್ಕಿದೆ. ಅವರೇ ರಾಬರ್ಟ್ ನವರಾಜ್. ಸುಮಾರು 30 ವರ್ಷಗಳ ಹಿಂದೆಯೇ ಕೆಲಸವನ್ನರಸಿ ಗೋವಾಕ್ಕೆ ಹೋಗಿ ಅಲ್ಲಿಯೇ ಹೊಸ ಬದುಕು ಕಂಡುಕೊಂಡವರು. ಆದರೂ ಚಲನಚಿತ್ರದ ಮೇಲಿನ ಪ್ರೀತಿಯಿಂದ ನಂತರದಲ್ಲಿ ಕೊಂಕಣಿ, ಮರಾಠಿ ಭಾಷೆಗಳಲ್ಲಿ ಕೆಲ ಚಿತ್ರಗಳನ್ನು ನಿರ್ಮಾಣ ಮಾಡಿದರು. ಈಗ ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಪಾರ್ಥಸಾರಥಿ ಎಂಬ ಚಿತ್ರಕ್ಕೆ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಜತೆಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾ ರೆ. ಅವರೇ ಹೇಳುವಂತೆ ಹೊರ ರಾಜ್ಯ ಗೋವಾ ಕನ್ನಡಿಗರು ನಿರ್ಮಿಸಿದ ಮೊದಲನೆ ಕನ್ನಡ ಚಿತ್ರ ಇದಾಗಿದೆ. ಅಪ್ಪ-ಅಮ್ಮ ಬೆಳೆಸಿದ ಮಕ್ಕಳು ಸಮಾಜದಲ್ಲಿ ಸಾಧನೆ ಮಾಡುವುದು ಸಾಮಾನ್ಯ. ಅದರಂತೆ ಅನಾಥ ಹುಡುಗನನ್ನು ನಿರ್ಲಕ್ಷ್ಯ ಮಾಡದೆ ಪ್ರೀತಿಯನ್ನು ತೋರಿಸಿ ಬೆಳೆಸಿದರೆ ಆತನೂ ಸಹ ಬುದ್ಧಿವಂತನಾಗುತ್ತಾನೆ ಉತ್ತಮ ಸಾಧನೆ ಮಾಡುತ್ತಾನೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಅಂತಹುದೇ ಹುಡುಗನೊಬ್ಬನ ಸ್ಪೂರ್ತಿಯಿಂದ ಈ ಚಿತ್ರದ ಕತೆಯನ್ನು ಸಿದ್ಧಪಡಿಸಲಾಗಿದೆಯಂತೆ. ಚಿತ್ರದಲ್ಲಿ ಪೊಲೀಸ್ ಕತೆ ಇದ್ದರೂ ತುಂಬಾ ಆ್ಯಕ್ಷನ್ ಇರದೆ, ಭಾವನೆಗಳಿಗೆ ಹೆಚ್ಚು ಒತ್ತುಕೊಟ್ಟು ಕಥೆ ಮಾಡಲಾಗಿದೆಯಂತೆ.

ಅನಾಥನಾಗಿ ಬೆಳೆದು ಮುಂದೆ ಛಲದಿಂದ ಶಿಕ್ಷಣ ಪಡೆದು ಐಪಿಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಕ ರೇಣುಕ್‍ಕುಮಾರ್‍ಗೆ ಇದು ಮೊದಲ ಚಿತ್ರ. ಪತ್ರಕರ್ತೆಯಾಗಿ ನಟಿಸಿರುವ ಕನ್ನಡತಿ ಅಕ್ಷತಾ ಚಿತ್ರದ ನಾಯಕಿ. ಇವರಿಗೂ ಕನ್ನಡದಲ್ಲಿ ಮೊದಲ ಚಿತ್ರವಾಗಿದ್ದರೂ, ಈಗಾಗಲೇ ಮಲೆಯಾಳಂ, ತಮಿಳು ಚಿತ್ರಗಳಲ್ಲಿ ನಟಿಸಿದ ಅನುಭವವಿದೆಯಂತೆ. ಟಗರು ಚಿತ್ರದ ಹಾಡಿಗೆ ನೃತ್ಯ ಸಂಯೋಜಿಸಿದ್ದ ರಾಜು ಈ ಚಿತ್ರದ ಎರಡು ಹಾಡುಗಳಿಗೆ ಕೆಲಸ ಮಾಡಿದ್ದಾ ರೆ. ನೀಲೇಶ್‍ಕೇಣಿ ಚಿತ್ರದ ಛಾಯಾಗ್ರಾಹಕರು. ಹರ್ಷವರ್ಧನ್ ಸಂಭಾಷಣೆ ಚಿತ್ರಕ್ಕಿದ್ದು, ಚಿತ್ರದ ಐದು ಗೀತೆಗಳಿಗೆ ಸಂಗೀತ ಸಂಯೋಜಿಸಿರುವುದು ವಿಕ್ಟರ್ ಲೋಗಿದಾಸನ್. ತಾರಾಬಳಗದಲ್ಲಿ ಸಿದ್ದು, ಮಿಥುನ್, ಮಾಸ್ಟರ್ ಆದಿತ್ಯ, ದೀಪಕ್, ಲಕ್ಷ್ಮೀಶ, ಪ್ರವೀಣ್ ಶೆಟ್ಟಿ, ಮಂಜು ಮುಂತಾದವರು ಅಭಿನಯಿಸಿದ್ದಾ ರೆ. ಬಹಳಷ್ಟು ಯುವ ಪ್ರತಿಭೆಗಳೇ ಸೇರಿಕೊಂಡು ನಿರ್ಮಿಸಿರುವ ಈ ಚಿತ್ರ ಸುಮಾರು 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ.

Facebook Comments

Sri Raghav

Admin