ನಾಳೆ ತೆರೆಯ ಮೇಲೆ ‘ಸದ್ದು’

ಈ ಸುದ್ದಿಯನ್ನು ಶೇರ್ ಮಾಡಿ

saddu-2

ತಶಾ ಪ್ರೊಡಕ್ಷನ್ಸ್ ಹಾಗೂ ಕಾರ್ತೀಕ್ ಅಂಡ್ ವಿಯಾನ್ ಎಂಟರ್‍ಟೈನ್‍ಮೆಂಟ್ ಲಾಂಛನದಲ್ಲಿ ವಚನ್ ಶೆಟ್ಟಿ ಹಾಗೂ ಡಿ. ಕೃಷ್ಣ ಚೈತ್ಯನ್ಯ ನಿರ್ಮಾಣ ಮಾಡಿರುವ ಚಿತ್ರ ಸದ್ದು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಡಲತೀರದ ಬಹುತೇಕ ಹೊಸ ಪ್ರತಿಭೆಗಳ ಸಂಗಮದಲ್ಲಿ ತಯಾರಾದ ಈ ಚಿತ್ರಕ್ಕೆ ಅರುಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕುತೂಹಲಕರವಾದ ಥ್ರಿಲ್ಲರ್ ಕಥೆಯಿದ್ದು, ಶಬ್ಧದ ಆಕರ್ಷಣೆಗೆ ಒಳಗಾಗಿ ಅದರ ಹಿಂದೆ ನಾವು ಹೋದಾಗ ಏನೇನೆಲ್ಲ ಪರಿಣಾಮ ಉಂಟಾಗುತ್ತದೆ ಎಂದು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಪರಿಸರದ ಮೇಲಿನ ಕಾಳಜಿಯನ್ನು ಬಿಂಬಿಸುವ ಮಹಿಳಾ ಪ್ರಧಾನ ಕಥಾನಕವನ್ನು ಈ ಚಿತ್ರ ಒಳಗೊಂಡಿದೆ.

ಈ ಚಿತ್ರಕ್ಕೆ ವೀರೇಶ್ ಛಾಯಾಗ್ರಹಣ, ಚೇತನ್ ಸಂಗೀತ, ಮುತ್ತುರಾಜ್ ಸಂಕಲನ, ಅಶೋಕ್, ಆನಂದ್ ಅವರ ಸಹ ನಿರ್ದೇಶನವಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಅಶೋಕ್ ಕಾರ್ಯನಿರ್ವಹಿಸಿದ್ದಾರೆ. ನಿಖಿತಾ ಸ್ವಾಮಿ, ಭರತ್, ಭಾಗ್ಯ, ಭೋಜರಾಜ, ವಾಮಂಜೂರು, ಹರೀಶ್, ಆನಂದ್, ವಿಷ್ಣು, ಪೂಜಾ, ಆಶಿತಾ ಮುಂತಾದ ಕಲಾವಿದರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Facebook Comments

Sri Raghav

Admin