ಬಹುಮತ ಸಾಬೀತಿಗೆ ಯಾವುದೇ ವಿಘ್ನ ಎದುರಾಗದಂತೆ ಪ್ರಾರ್ಥಿಸಿ ಸ್ಪೆಷಲ್ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

Pooja--01

ಕೊಪ್ಪಳ, ಮೇ 17- ಬಹುಮತ ಸಾಬೀತುಪಡಿಸಲು ಯಾವುದೇ ವಿಘ್ನ ಎದುರಾಗಬಾರದೆಂದು ಪ್ರಾರ್ಥಿಸಿ ಬಿಜೆಪಿ ಕಾರ್ಯಕರ್ತರು ಶ್ರೀ ಗುರುರಾಯರ ಮೊರೆ ಹೋದರು. ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮೂಲ ರಾಮದೇವರು ಹಾಗೂ ಬೃಂದಾವನಕ್ಕೆ ವಿಶೇಷ ಹಾಲಿನ ಅಭಿಷೇಕ ಮಾಡಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ಯಾವುದೇ ತೊಂದರೆ ಇಲ್ಲದೆ ಬಹುಮತ ಸಾಬೀತುಪಡಿಸುವಂತಾಗಲಿ ಎಂದು ಅಭಿಮಾನಿಗಳು, ಕಾರ್ಯಕರ್ತರು ಪ್ರಾರ್ಥಿಸಿದರು. ಮುಖಂಡರಾದ ಹಾಲೇಶ್ ಕಂದಾರಿ, ಡಾ.ಕೆ.ಜಿ.ಕುಲಕರ್ಣಿ, ಅಪ್ಪಣ್ಣ ಪದಕಿ, ಮಂಜುನಾಥ ಗದಗಿನ ಸೇರಿದಂತೆ ಹಲವಾರು ಅಭಿಮಾನಿಗಳು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

Facebook Comments

Sri Raghav

Admin