ನಾಳೆಯಿಂದ ಥಿಯೇಟರ್’ಗಳಲ್ಲಿ ‘ರಾಂಬೋ-2’ ರಂಜನೆ

ಈ ಸುದ್ದಿಯನ್ನು ಶೇರ್ ಮಾಡಿ

rambo-1

2012ರಲ್ಲಿ ಬಿಡುಗಡೆಗೊಂಡ ರ‍್ಯಾಂಬೊ ಚಿತ್ರ ಪ್ರೇಕ್ಷಕರಿಗೆ ಬೊಂಬಾಟ್ ಭೋಜನದಂತೆ ಮನರಂಜನೆಯ ರಸದೌತಣ ನೀಡಿತ್ತು. ಈಗ ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ರ‍್ಯಾಂಬೊ-2 ಬರುತ್ತಿದೆ. ತನ್ನ ವಿಶೇಷ ಹಾವ-ಭಾವ, ಅಭಿನಯ ಹಾಗೂ ಹಾಸ್ಯ ಚಿತ್ರಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ನಕ್ಕು ನಗಿಸಿದ ಶರಣ್ ಅಂಡ್ ಟೀಮ್ ಬಹಳ ದಿನಗಳ ನಂತರ ಮತ್ತೆ ಹೊಸ ಪ್ರಾಜೆಕ್ಟ್‍ನೊಂದಿಗೆ ಬರ್ತಿದ್ದಾರೆ. ತನಗೆ ಹೀರೋ ಪಟ್ಟ ತಂದುಕೊಟ್ಟಿದ್ದ ಸೂಪರ್‍ಹಿಟ್ ಸಿನಿಮಾದ ಟೈಟಲ್ ಇಟ್ಟುಕೊಂಡು ನಟ ಶರಣ್ ಈಗ ರ‍್ಯಾಂಬೊ-2 ಎಂಬ ಹೆಸರಿನಲ್ಲಿ ಬೆಳ್ಳಿ ಪರದೆ ಮೇಲೆ ಸುಮಾರು  150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಇದೇ ವಾರ ತೆರೆ ಮೇಲೆ ಬರುತ್ತಿದ್ದಾರೆ.

ಈ ಹಿಂದೆ ದಿಲ್‍ವಾಲ, ಕೃಷ್ಣ-ರುಕ್ಕು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಅನಿಲ್‍ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರ‍್ಯಾಂಬೋ ಚಿತ್ರಕ್ಕೆ ನಿರ್ದೇಶಕ ತರುಣ್ ಕಿಶೋರ್ ಕ್ರಿಯೇಟಿವ್  ಹೆಡ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಲಡ್ಡು ಸಿನಿಮಾ ಹೌಸ್ ಬ್ಯಾನರ್‍ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶರಣ್ ಮತ್ತು ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿ  ಅಭಿನಯಿಸಿದ್ದಾರೆ.

ಸದ್ಯ ಬಿಡುಗಡೆಯಾಗಿರುವ  ಪೋಸ್ಟರ್‍ನಲ್ಲಿ ಕಾಮಿಡಿ ಕಿಂಗ್ ಶರಣ್ ಸಖತ್ ಸ್ಟೆ ೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ರ‍್ಯಾಂಬೊ ಚಿತ್ರಕ್ಕೂ ರ‍್ಯಾಂಬೊ-2 ಸಿನಿಮಾಗೂ ಟೈಟಲ್‍ನಲ್ಲಷ್ಟೇ ಸಾಮ್ಯತೆ ಇದ್ದು ಹೊಸ ಕತೆ, ಹೊಸ ನಿರೂಪಣೆಯೊಂದಿಗೆ ಈ ಚಿತ್ರ ನಿರ್ಮಾಣವಾಗಿದೆ. ಈಗಾಗಲೇ ಬೆಂಗಳೂರು, ಬಿಜಾಪುರ, ಗೋವಾ, ರಾಮೇಶ್ವರ ಹಾಗೂ ರಾಜಸ್ಥಾನದಂಥ ಸುಂದರ ಲೊಕೇಷನ್‍ಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಈಗಾಗಲೇ ಈ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಪ್ರೇಕ್ಷಕರ ಮನಸ್ಸು ಗೆದ್ದಿದ್ದು, ಅರ್ಜುನ್ ಜನ್ಯ ಅವರ ಸಂಗೀತದ ಮೋಡಿ ಮತ್ತೊಮ್ಮೆ ಎಲ್ಲರನ್ನು ಸೆಳೆಯಲಿದೆ ಎಂಬ ನಿರೀಕ್ಷೆ ಚಿತ್ರತಂಡದಲ್ಲಿದೆ.

ಈ ಚಿತ್ರಕ್ಕೆ ಸುಧಾಕರ್ ಯಶ್‍ರಾಜ್ ಛಾಯಾಗ್ರಹಣ ಮಾಡಿದ್ದು, ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.  ಇದು ರೊಮ್ಯಾಂಟಿಕ್ ಪ್ರೇಮಕಥೆ ಹೊಂದಿದ್ದು, ಸಿನಿಮಾ ಜರ್ನಿಯಲ್ಲೇ ಹೆಚ್ಚುಭಾಗ ಸಾಗಲಿದೆಯಂತೆ. ಗೆಳೆಯರೆಲ್ಲರ ಸಹಕಾರದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ನಟ ಶರಣ್, ನಾಯಕಿ ಆಶಿಕಾ ರಂಗನಾಥ್ ಹಾಗೂ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿದ್ದು, ಉಳಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿ ಕಾಣಿಸಲಿದೆ.
ವಿಶೇಷವಾಗಿ ಐಂದ್ರಿತಾ ರೈ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಬೆಳ್ಳಿ ಪರದೆ ಮೇಲೆ ನಗೆ ಹೊಳೆ ಹರಿಸಲು ರ‍್ಯಾಂಬೋ-2 ಬರುತ್ತಿದೆ.

Facebook Comments