‘ಸರ್ಕಾರ ರಚನೆಗೆ ಆಹ್ವಾನ ಕುರಿತು ರಾಜ್ಯಪಾಲರು ಯಾವುದೇ ಕೋರ್ಟ್‍ಗೆ ಉತ್ತರಿಸಬೇಕಿಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-CM--13

ನವದೆಹಲಿ, ಮೇ 17-ಸರ್ಕಾರ ರಚನೆ ವಿಷಯದಲ್ಲಿ ಯಾವ ಪಕ್ಷವನ್ನು ಆಹ್ವಾನಿಸಬೇಕು ಎಂಬುದು ರಾಜ್ಯಪಾಲರ ಪರಮ ಅಧಿಕಾರ. ಅವರು ತಮ್ಮ ವಿವೇಚನೆ ಮೇರೆಗೆ ಯಾವುದೇ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬಹುದು. ಈ ಬಗ್ಗೆ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಯಾವುದೇ ನ್ಯಾಯಾಲಯಕ್ಕೆ ಉತ್ತರ ನೀಡಬೇಕಿಲ್ಲ ಎಂದು ಹಿರಿಯ ವಕೀಲ ಮುಕುಲ್ ರೋಹಟಗಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಸರ್ಕಾರ ರಚನೆ ಕಸರತ್ತು ಸಂಬಂಧ ಉದ್ಭವಿಸಿರುವ ವಿವಾದ ಕುರಿತು ನಿನ್ನೆ ಸುಪ್ರೀಂಕೋರ್ಟ್‍ನಲ್ಲಿ ಬಿಜೆಪಿ ಪರವಾಗಿ ವಕಾಲತ್ತು ವಹಿಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆ ಸಂದರ್ಭದಲ್ಲಿ ರಾಜಕೀಯ ಪಕ್ಷವನ್ನು ಆಹ್ವಾನಿಸುವುದು ರಾಜ್ಯಪಾಲರ ಕೆಲಸ. ಯಾವ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬೇಕೆಂಬುದು ಅವರ ವಿವೇಚನೆಗೆ ಬಿಟ್ಟ ವಿಷಯ. ಇದನ್ನು ಪ್ರಶ್ನಿಸಲಾಗದು. ರಾಜ್ಯಪಾಲರಾಗಲಿ ಅಥವಾ ರಾಷ್ಟ್ರಪತಿ ಅವರಾಗಲಿ ಈ ಬಗ್ಗೆ ಯಾವುದೇ ನ್ಯಾಯಾಲಯಗಳಿಗೆ ಉತ್ತರ ನೀಡಬೇಕಿಲ್ಲ. ಕೋರ್ಟ್ ಸಹ ಸಂವಿಧಾನಿಕ ಪ್ರಕ್ರಿಯೆಗೆ ತಡೆ ನೀಡಬಾರದು ಎಂದು ರೋಹಟಗಿ ಹೇಳಿದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ತಿಳಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಕಾಂಗ್ರೆಸ್-ಜೆಡಿಎಸ್ ಈ ಅರ್ಜಿಯನ್ನು ಸಲ್ಲಿಸುವ ಅಗತ್ಯವಿರಲಿಲ್ಲ. ಬಹುಮತ ಸಾಬೀತು ಪ್ರಕ್ರಿಯೆ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿತ್ತು ಎಂದು ತಿಳಿಸಿದರು.

Facebook Comments

Sri Raghav

Admin