ಹೆಣ್ಣುಮಕ್ಕಳಿಗೆ ಪಿಜಿ ಎಷ್ಟು ಸೇಫ್…?

ಈ ಸುದ್ದಿಯನ್ನು ಶೇರ್ ಮಾಡಿ

PG--01

ತುಮಕೂರು, ಮೇ 17-ವಿದ್ಯಾಭ್ಯಾಸ ಹಾಗೂ ಉದ್ಯೋಗ ಅರಸಿಕೊಂಡು ಬರುವ ಹೆಣ್ಣುಮಕ್ಕಳು ಉಳಿದುಕೊಳ್ಳಲು ಪಿಜಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಅವು ಎಷ್ಟು ಸುರಕ್ಷಿತ ಎಂಬುದು ಒಂದು ಕ್ಷಣ ಯೋಚಿಸಬೇಕು. ನಗರದ ಪಿಜಿಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬರು ತಿಂಗಳ ಹಣ ಕಟ್ಟಲು ತಡ ಮಾಡಿದ್ದಕ್ಕೆ ಪಿಜಿ ಮಾಲೀಕರು ಆಕೆಯನ್ನು ಹೊರಗೆ ಕಳುಹಿಸಿರುವುದು ಹೆಣ್ಣು ಮಕ್ಕಳನ್ನು ಆತಂಕಕ್ಕೀಡು ಮಾಡಿದೆ.

ಎಸ್.ಎಸ್.ಪುರಂನ 22ನೇ ಕ್ರಾಸ್‍ನಲ್ಲಿರುವ ನಿಸರ್ಗ ಪಿಜಿಯಲ್ಲಿ ಕಳೆದ ಎರಡು ತಿಂಗಳಿನಿಂದ ವಿದ್ಯಾರ್ಥಿನಿಯೊಬ್ಬಳು ಎರಡು ತಿಂಗಳಿನಿಂದ ಈ ಪಿಜಿಯಲ್ಲಿ ಇದ್ದಾರೆ. ಪಿಜಿ ಸೇರುವ ಮುನ್ನ 50ಸಾವಿರ ಮುಂಗಡ ಹಣ ಕಟ್ಟಿದ್ದರೂ ವಿದ್ಯಾರ್ಥಿನಿ ಪೋಷಕರು ಹಣ ಕಳುಹಿಸಲು ತಡ ಮಾಡಿದ್ದರಿಂದ ಎರಡು ತಿಂಗಳ ಹಣ ಕಟ್ಟು ಸಾಧ್ಯವಾಗಿರಲಿಲ್ಲ.

ಮುಂಗಡ ಹಣದಲ್ಲಿ ಹಿಡಿದುಕೊಳ್ಳುವಂತೆ ಹೇಳಿದ್ದರೂ ಪಿಜಿ ಮಾಲೀಕರು ವಿದ್ಯಾರ್ಥಿನಿ ಮಾತಿಗೆ ಮನ್ನಣೆ ನೀಡದೆ ಎರಡು ದಿನ ಪಿಜಿಯಿಂದ ಹೊರಗೆ ಹಾಕಿದ್ದಾರೆ. ಸುದ್ದಿ ತಿಳಿದ ಎನ್‍ಇಪಿಎಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ರಾಘವೇಂದ್ರ ಅವರು ಕೂಡಲೇ ಪಿಜಿ ಬಳಿ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಂದ ವ್ಯವಸ್ಥೆ ಹಾಗೂ ಭದ್ರತೆ ಬಗ್ಗೆ ವಿಚಾರಿಸಿದ್ದಾರೆ. ಪಿಜಿಯ ಕೆಲವು ಅವ್ಯವ್ಥೆಗಳ ಬಗ್ಗೆ ಇಲ್ಲಿನ ವಿದ್ಯಾರ್ಥಿಗಳು ಅಸಮಾಧಾನ ಹೊರ ಹಾಕಿದ್ದಾರೆ.
ತರಾಟೆ:  ರಾತ್ರೋರಾತ್ರಿ ಹೆಣ್ಣುಮಕ್ಕಳನ್ನು ಪಿಜಿಯಿಂದ ಹೊರ ಹಾಕಿದರೆ ಅವರು ಎಲ್ಲಿಗೆ ಹೋಗಬೇಕು ಎಂದು ಪಿಜಿ ಮಾಲೀಕರನ್ನು ರಾಘವೇಂದ್ರ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಕ್ರೋಶ:  ವಿದ್ಯಾರ್ಥಿನಿಯನ್ನು ರಾತ್ರೋರಾತ್ರಿ ಹೊರಗೆ ಹಾಕಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Facebook Comments

Sri Raghav

Admin