‘ಆನಂದ್‍ಸಿಂಗ್ ರನ್ನು ಬೆದರಿಸಿ ಬಂಧನದಲ್ಲಿಟ್ಟಿದ್ದಾರೆ’

ಈ ಸುದ್ದಿಯನ್ನು ಶೇರ್ ಮಾಡಿ

Anand-Singh--01

ಬೆಂಗಳೂರು, ಮೇ 18- ಕಾಂಗ್ರೆಸ್ ಶಾಸಕ ಆನಂದ್‍ಸಿಂಗ್ ಅವರನ್ನು ಬಿಜೆಪಿಯವರು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದರು. ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಹೋದ ಕಡೆಯಲೆಲ್ಲಾ ಇಂತಹದ್ದೇ ಕೆಲಸ ಮಾಡಿದ್ದಾರೆ. ಅವರಿಗೆ ಕಾನೂನು ಗೊತ್ತಿಲ್ಲ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂದು ಆರೋಪಿಸಿದರು.

ಆನಂದ್‍ಸಿಂಗ್ ಅವರನ್ನು ಆದಾಯ ತೆರಿಗೆ, ಜಾರಿ ನಿರ್ದೇಶನನಾಲಯದ ಅಧಿಕಾರಿಗಳ ಮೂಲಕ ಬೆದರಿಸಿ ಅಕ್ರಮವಾಗಿ ಬಂಧನದಲ್ಲಿಡಲಾಗಿದೆ. ಆದರೂ ಅವರು ನಮ್ಮ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ವಿಶ್ವಾಸ ಮತ ಯಾಚನೆ ದಿನ ಕಾಂಗ್ರೆಸ್‍ಗೆ ಮತ ಹಾಕುತ್ತಾರೆ ಎಂದು ಸ್ಪಷ್ಟಪಡಿಸಿದರು.

ಆನಂದ್‍ಸಿಂಗ್ ಅವರನ್ನು ಅಪಹರಿಸಲಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಮನೆಯಲ್ಲಿದ್ದ ಆನಂದ್‍ಸಿಂಗ್ ತಮ್ಮಷ್ಟಕ್ಕೆ ತಾವು ನಡೆದುಕೊಂಡು ಹೋಗಿಲ್ಲ. ಅವರನ್ನು ಬಲವಂತವಾಗಿ ಕರೆದೊಯ್ಯಲಾಗಿದೆ. ದೆಹಲಿಯಲ್ಲಿ ಅಕ್ರಮವಾಗಿ ಹಿಡಿದಿಟ್ಟುಕೊಳ್ಳಲಾಗಿದೆ. ಪ್ರತಾಪ್‍ಗೌಡ ಪಾಟೀಲ್ ಅವರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ. ಮೇ 16ರಂದು ಪ್ರತಾಪ್‍ಗೌಡ ಪಾಟೀಲ್ ಕಾಂಗ್ರೆಸ್‍ಗೆ ಬೆಂಬಲ ನೀಡುವುದಾಗಿ ಪತ್ರಕ್ಕೆ ಸಹಿ ಮಾಡಿಕೊಟ್ಟಿದ್ದರು. ಆದರೆ, ಅನಂತರ ಅವರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡಿದೆ ಎಂದರು.

ಬಿಜೆಪಿ ನಾಯಕರು ಒಂದು ಸುಳ್ಳನ್ನು ನೂರು ಬಾರಿ ಹೇಳಿ ನಿಜ ಮಾಡಿ ಗ್ಲೋಬೆಲ್ಸ್ ಥಿಯರಿಯನ್ನು ಅತಿಸುಂದರವಾಗಿ ಅನುಸರಿಸುತ್ತಿದ್ದಾರೆ. ಆದರೆ, ಅದು ಕರ್ನಾಟಕದಲ್ಲಿ ಅದು ನಡೆಯುವುದಿಲ್ಲ ಎಂದು ಹೇಳಿದರು. ಕಾಂಗ್ರೆಸಿನ ಎಲ್ಲಾ ಶಾಸಕರು ಒಟ್ಟಾಗಿದ್ದಾರೆ. 78 ಮಂದಿ ಪಕ್ಷದ ಶಾಸಕರು, 2 ಪಕ್ಷೇತರರು ಹಾಗೂ 37 ಜೆಡಿಎಸ್ ಶಾಸಕರು ಸೇರಿ 117 ಮಂದಿಯ ಸಂಖ್ಯಾಬಲ ಕಾಂಗ್ರೆಸ್-ಜೆಡಿಎಸ್‍ನ ಮೈತ್ರಿಕೂಟಕ್ಕಿದೆ. 104 ಸಂಖ್ಯೆ ಹೊರತು ಪಡಿಸಿ ಒಂದೂ ಕೂಡ ಹೆಚ್ಚಿಲ್ಲ ಎಂದ ಅವರು, ಸುಪ್ರೀಂಕೋರ್ಟ್‍ನ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದರು.

Facebook Comments

Sri Raghav

Admin