ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಅಸ್ತಿತ್ವಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Cauvery-Supreme--Court
ನವದೆಹಲಿ, ಮೇ 18-ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮುಂಗಾರು ಆರಂಭಕ್ಕೆ ಮುನ್ನವೇ ಕಾರ್ಯಾರಂಭವಾಗಬೇಕೆಂದು ಸುಪ್ರೀಂಕೋರ್ಟ್ ಇಂದಿಲ್ಲಿ ತೀರ್ಪು ನೀಡಿದೆ. ಕಾವೇರಿ ಕರುಡು ಪ್ರತಿಯನ್ನು ಸಲ್ಲಿಸಿದ ಕೇಂದ್ರ ಸರ್ಕಾರದ ಮೂಲವನ್ನೇ ಆಧಾರವಾಗಿಟ್ಟುಕೊಂಡು 35 ಪುಟಗಳ ತೀರ್ಪುನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಕನ್ವಿಲ್ಕರ್ ಅವರ ಪೀಠ ಇಂದು ಮಹತ್ವದ ಆದೇಶ ನೀಡಿದೆ.

ಪ್ರಾಧಿಕಾರಕ್ಕೆ ಸಂಪೂರ್ಣ ಅಧಿಕಾರಕ್ಕೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ ಮತ್ತು ಇದೇ ವೇಳೆ ಪುದುಚೇರಿಯ ಬೇಡಿಕೆ ಅನ್ವಯ ಆಯಾ ರಾಜ್ಯಗಳಲ್ಲಿರುವ ಜಲಾಶಯಗಳು ಆ ರಾಜ್ಯ ಸರ್ಕಾರದ ಸುಪರ್ದಿಯಲ್ಲೇ ಇರಲಿದೆ. ನೀರು ಬಿಡುಗಡೆ ಕುರಿತಂತೆ ಈ ಪ್ರಾಧಿಕಾರ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಸುಪ್ರೀಂಕೋರ್ಟ್ ತಿಳಿಸಿರುವಂತೆಯೇ ವಾರ್ಷಿಕ ನೀರು ಬಿಡುಗಡೆ ಪ್ರಮಾಣದ ಮೇಲ್ವಿಚಾರಣೆಯನ್ನು ಇದು ನೋಡಿಕೊಳ್ಳಲಿದೆ.  ಮಳೆ ಕೊರತೆ ಸಂದರ್ಭದಲ್ಲಿ ನೀರಿನ ಕೊರತೆ ಬಗ್ಗೆ ಗಮನದಲ್ಲಿಸಿರಿಸಿಕೊಂಡು ಕಾವೇರಿ ನದಿಪಾತ್ರ ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಹಂಚುವ ಅಧಿಕಾರವನ್ನು ನೀಡಲಾಗಿದೆ.

ಕರ್ನಾಟಕದ ಆತಂಕ:
ಪ್ರಾಧಿಕಾರ ರಚನೆಯಿಂದಾಗಿ ಕಾವೇರಿ ನೀರು ಈಗ ಅವರ ಹಕ್ಕಾಗಿರುತ್ತದೆ. ರಾಜ್ಯದಲ್ಲಿ ಅದರಲ್ಲಿ ಅಧಿಕಾರ ಮೊಟಕುಗೊಳ್ಳುತ್ತದೆ ಎಂಬ ಆತಂಕ ನೀರಾವರಿ ತಜ್ಞರ ಅಭಿಪ್ರಾಯವಾಗಿದೆ.

Facebook Comments

Sri Raghav

Admin